ಮಾಧ್ಯಮಗಳು ಮಹಿಳೆಯರ ಬಗ್ಗೆ ಸಂವೇದನಾಶೀಲವಾಗಿರಬೇಕು: ರಾಷ್ಟ್ರಪತಿ

Update: 2023-03-12 17:24 GMT

ಹೊಸದಿಲ್ಲಿ, ಮಾ. 12: ಮಾಧ್ಯಮಗಳು ತಮ್ಮ ಜಾಹೀರಾತು, ಸುದ್ದಿ  ಹಾಗೂ ಕಾರ್ಯಕ್ರಮಗಳಲ್ಲಿ ಮಹಿಳೆಯರ ಘನತೆ ಹಾಗೂ ಸುರಕ್ಷತೆ ಬಗ್ಗೆ ಸಂಪೂರ್ಣ ಸಂವೇದನಾಶೀಲರಾಗಿರುವುದನ್ನು   ನಿರೀಕ್ಷಿಸುವುದಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರವಿವಾರ ಹೇಳಿದ್ದಾರೆ. 

ನವಭಾರತ್ ಟೈಮ್ಸ್ ಆಯೋಜಿಸಿದ್ದ ಅಖಿಲ ಮಹಿಳಾ ಬೈಕ್ ರ್ಯಾಲಿಗೆ ಹಸಿರು ನಿಶಾನೆ ತೋರಿಸುವ ಸಂದರ್ಭ ವೀಡಿಯೊ ಸಂದೇಶದಲ್ಲಿ ಮುರ್ಮು, ಸಂವಿಧಾನದ ಪ್ರಕಾರ ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಅಭ್ಯಾಸವನ್ನು ತ್ಯಜಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು. 
‘‘ಈ ಮೂಲಭೂತ ಕರ್ತವ್ಯವನ್ನು ಅನುಸರಿಸಲು ಪ್ರತಿಯೊಬ್ಬ ನಾಗರಿಕನೂ ಮಹಿಳೆಯರಿಗೆ ಗೌರವ ನೀಡುವುದು ಅವಶ್ಯವಾಗಿದೆ.   ಮಹಿಳೆಯ ಬಗ್ಗೆ ಗೌರವಯುತ ನಡತೆಯ ಅಡಿಪಾಯವನ್ನು ಕುಟುಂಬದಲ್ಲಿಯೇ ಹಾಕಬಹುದು’’ ಎಂದು ಅವರು ಹೇಳಿದರು.

ತಾಯಂದಿರು ಹಾಗೂ ಸಹೋದರಿಯರು ತಮ್ಮ ಪುತ್ರರು ಹಾಗೂ ಸಹೋದರರಲ್ಲಿ ಮಹಿಳೆಯರಿಗೆ ಗೌರವ ನೀಡುವ ಮೌಲ್ಯಗಳನ್ನು ಬೆಳಸಬೇಕು ಮತ್ತು ಶಿಕ್ಷಕರು ತಮ್ಮ ವಿದ್ಯಾರ್ಥಿಗಳಲ್ಲಿ ಮಹಿಳೆಯರ ಬಗ್ಗೆ ಗೌರವ,  ಸಂವೇದನಾಶೀಲತೆಯ ಸಂಸ್ಕೃತಿಯನ್ನು ಬೆಳೆಸಬೇಕು  ಎಂದು ಅವರು ಕೋರಿದರು. 

Similar News