ತಮಿಳುನಾಡು ಪೊಲೀಸ್‌ಗೆ ನ್ಯಾಯಾಂಗ ಅಧಿಕಾರ ನೀಡುವ ಆದೇಶ ರದ್ದುಪಡಿಸಿದ ಮದ್ರಾಸ್ ಹೈಕೋರ್ಟ್

Update: 2023-03-14 17:17 GMT

ಚೆನ್ನೈ, ಮಾ. 14: ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ಗಳಾಗಿ ಕಾರ್ಯನಿರ್ವಹಿಸಲು ಪೊಲೀಸರಿಗೆ ಅಧಿಕಾರ ನೀಡುವ ತಮಿಳುನಾಡು ಸರಕಾರದ ಎರಡು ಆದೇಶಗಳನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಪಡಿಸಿದೆ.

2013 ಮತ್ತು 2014ರಲ್ಲಿ ತಮಿಳುನಾಡು ಸರಕಾರ ಜಾರಿಗೆ ತಂದಿರುವ ಆದೇಶಗಳು, ಪದೇ ಪದೇ ಅಪರಾಧಗಳನ್ನು ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಡೆಪ್ಯುಟಿ ಪೊಲೀಸ್ ಕಮಿಶನರ್ಗಳಿಗೆ ಅಧಿಕಾರ ನೀಡಿದ್ದವು. ಬಾಂಡ್ಗಳಿಗೆ ಸಹಿ ಹಾಕುವುದು, ಬಾಂಡ್ ಮೊತ್ತಗಳನ್ನು ಮುಟ್ಟುಗೋಲು ಹಾಕುವುದು, ಶೋಕಾಸ್ ನೋಟಿಸ್ಗಳನ್ನು ಹೊರಡಿಸುವುದು ಮತ್ತು ಬಾಂಡ್ಗಳ ಶರತ್ತುಗಳನ್ನು ಉಲ್ಲಂಘಿಸುವ ವೃತ್ತಿಪರ ಅಪರಾಧಿಗಳಿಗೆ ಶಿಕ್ಷೆ ನೀಡುವ ಅಧಿಕಾರಗಳನ್ನು ಈ ಆದೇಶಗಳು ಪೊಲಿಸರಿಗೆ ನೀಡುತ್ತವೆ.

ಈ ಅಧಿಕಾರಗಳನ್ನು ಸಾಮಾನ್ಯವಾಗಿ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ನ 107 ಮತ್ತು 110ನೇ ಪರಿಚ್ಛೇಗಳಡಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ಗಳು ಹೊಂದಿರುತ್ತಾರೆ.

ತಮಗೆ ಅಧಿಕಾರಗಳು ಸಿಕ್ಕ ಬಳಿಕ, ಡೆಪ್ಯುಟಿ ಪೊಲೀಸ್ ಕಮಿಶನರ್ಗಳು ನೀಡಿರುವ ಹಲವಾರು ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸಿದ ಮದ್ರಾಸ್ ಹೈಕೋರ್ಟ್ ಈ ತೀರ್ಪು ನೀಡಿತು. ರಾಜ್ಯ ಸರಕಾರದ ಆದೇಶಗಳು ಅಧಿಕಾರ ವಿಂಗಡಣೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.

ನ್ಯಾಯಾಂಗಕ್ಕೆ ಸೇರಿದ ಅಧಿಕಾರಗಳನ್ನು ಪೊಲೀಸರಿಗೆ ನೀಡಿದರೆ ಅರಾಜಕತೆಗೆ ಕಾರಣವಾಗಬಹುದು ಎಂದು ಸೋಮವಾರ ನ್ಯಾಯಮೂರ್ತಿಗಳಾದ ಎನ್. ಸತೀಶ್ಕುಮಾರ್ ಮತ್ತು ಎನ್. ಆನಂದ್ ವೆಂಕಟೇಶ್ ಅವರನ್ನೊಳಗೊಂಡ ವಿಭಾಗ ಪೀಠವೊಂದು ಅಭಿಪ್ರಾಯಪಟ್ಟಿತು.

Similar News