ವಿವಾಹಿತ ಪುರುಷರ ಆತ್ಮಹತ್ಯೆ ಹೆಚ್ಚಳ ಹಿನ್ನೆಲೆ: ರಾಷ್ಟ್ರೀಯ ಪುರುಷರ ಆಯೋಗ ರಚನೆಗೆ ಸುಪ್ರೀಂ ಕೋರ್ಟಿಗೆ ಅರ್ಜಿ

Update: 2023-03-15 11:49 GMT

ಹೊಸದಿಲ್ಲಿ: ಕೌಟುಂಬಿಕ ಹಿಂಸೆಯಿಂದ ವಿವಾಹಿತ ಪುರುಷರ ಆತ್ಮಹತ್ಯೆ ಪ್ರಕರಣಗಳನ್ನು ನಿಭಾಯಿಸಲು ಮತ್ತು ರಾಷ್ಟ್ರೀಯ ಪುರುಷ ಆಯೋಗ ರಚಿಸಬೇಕೆಂಬ ಆಗ್ರಹದ ಕುರಿತ ಅರ್ಜಿಯನ್ನು ಸುಪ್ರೀಂ ಕೋರ್ಟಿಗೆ ವಕೀಲ ಮಹೇಶ್‌ ಕುಮಾರ್‌ ತಿವಾರಿ ಎಂಬವರು ಸಲ್ಲಿಸಿದ್ದಾರೆ.

2021 ರಲ್ಲಿ ಪ್ರಕಟಗೊಂಡ ಎನ್‌ಸಿಆರ್‌ಬಿ ಡೇಟಾವನ್ನು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿರುವ ತಿವಾರಿ, ಈ ವರ್ಷದಲ್ಲಿ ದೇಶಾದ್ಯಂತ 1,64,033 ಮಂದಿ ಆತ್ಮಹತ್ಯೆಗೈದಿದ್ದರೆ ಅವರಲ್ಲಿ 81,063 ಮಂದಿ ವಿವಾಹಿತ ಪುರುಷರು ಹಾಗೂ 28,680 ಮಂದಿ ವಿವಾಹಿತ ಮಹಿಳೆಯರು ಎಂದು ಅವರು ವಿವರಿಸಿದ್ದಾರೆ.

ಶೇ 33.2 ಪುರುಷರು ಕೌಟುಂಬಿಕ ಸಮಸ್ಯೆಗಳಿಂದ, ಶೇ 4.8 ರಷ್ಟು ಮಂದಿ ವಿವಾಹ ಸಂಬಂಧಿ ಸಮಸ್ಯೆಗಳಿಂದ 2021 ರಲ್ಲಿ ಆತ್ಮಹತ್ಯೆಗೈದಿದ್ದಾರೆ. 2021 ರಲ್ಲಿ ಆತ್ಮಹತ್ಯೆಗೈದವರಲ್ಲಿ 1,18,979 ಮಂದಿ ಪುರುಷರು (ಶೇ 72) ಹಾಗೂ 45,026 (ಶೇ 27) ಮಂದಿ ಮಹಿಳೆಯರು ಎಂದು ಎನ್‌ಸಿಆರ್‌ಬಿ ಡೇಟಾ ಉಲ್ಲೇಖಿಸಿ ಅರ್ಜಿಯಲ್ಲಿ ಹೇಳಲಾಗಿದೆ.

ಕೌಟುಂಬಿಕ ಹಿಂಸೆಯಿಂದ ಸಮಸ್ಯೆ ಎದುರಿಸುತ್ತಿರುವ ಪುರುಷರ ದೂರುಗಳನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವೀಕರಿಸುವಂತಾಗಲು ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

ವಿವಾಹಿತ ಪುರುಷರ ಆತ್ಮಹತ್ಯೆ ಕುರಿತಂತೆ  ಅಧ್ಯಯನ ನಡೆಸುವಂತೆ ಕಾನೂನು ಆಯೋಗಕ್ಕೆ ಸೂಚಿಸಬೇಕು ಹಾಗೂ ರಾಷ್ಟ್ರೀಯ ಪುರುಷ ಆಯೋಗ ರಚಿಸುವಂತಾಗಲು ಕಾನೂನು ಆಯೋಗ ಪುರುಷರ ಸಮಸ್ಯೆಗಳ ಕುರಿತು ವರದಿ ಸಲ್ಲಿಸಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಗನಸಖಿ ಸಾವು ಪ್ರಕರಣಕ್ಕೆ ತಿರುವು

Similar News