ಜಾಗೃತ ಗ್ರಾಹಕರಾದರೆ ಗುಣಮಟ್ಟದ ಜೀವನ ಸಾಧ್ಯ: ಲಕ್ಷ್ಮೀಬಾಯಿ

Update: 2023-03-15 15:59 GMT

ಬ್ರಹ್ಮಾವರ : ಪ್ರತಿಯೊಬ್ಬ ನಾಗರಿಕ ಜಾಗೃತ ಗ್ರಾಹಕನಾದರೆ ಉತ್ತಮ ಗುಣಮಟ್ಟದ ಜೀವನ ಸಾಧ್ಯ ಎಂದು ಉಡುಪಿ ಜಿಲ್ಲಾ ಬಳಕೆದಾರರ ವೇದಿಕೆಯ ಗ್ರಾಹಕ ಮಾಹಿತಿ ಕೇಂದ್ರದ ಟ್ರಸ್ಟಿ ಲಕ್ಷ್ಮೀಬಾಯಿ ತಿಳಿಸಿದ್ದಾರೆ.

ಕಾಡೂರು ಗ್ರಾಪಂ ವ್ಯಾಪ್ತಿಯ ನಡೂರು ಗ್ರೀನ್ ಪ್ಯಾಲೇಸ್‌ನಲ್ಲಿ ಜರಗಿದ ಗ್ರಾಹಕ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಗ್ರಾಹಕರಾಗಿ ನಮ್ಮ ಹಕ್ಕುಗಳ ಅರಿವು ನಮಗಿರಬೇಕು ಮತ್ತು ಇದರಿಂದ ಸರಕು ಹಾಗೂ ಸೇವೆಗಳನ್ನು ಪಡೆಯುವ ಸಂಧರ್ಭದಲ್ಲಿ ಎದುರಾಗುವ ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯವಿದೆ ಎಂದು ಅವರು ಹೇಳಿದರು.

ಗ್ರಾಹಕ ರಕ್ಷಣಾ ಕಾನೂನು ೨೦೧೯ರ ಕುರಿತಂತೆ ಮಾಹಿತಿ ನೀಡಿದ ಗ್ರಾಹಕ ಮಾಹಿತಿ ಕೇಂದ್ರದ ಸಂಪನ್ಮೂಲ ವ್ಯಕ್ತಿ ಟಿ.ಚಂದ್ರಶೇಖರ್, ವಸ್ತುಗಳ ಖರೀದಿ ಸಂದರ್ಭದಲ್ಲಿ ದರ, ಗುಣಮಟ್ಟ ಹಾಗೂ ವಾಯಿದೆ ಕುರಿತು ಜಾಗೃತಿ ವಹಿಸುವುದು ಅತ್ಯಂತ ಅಗತ್ಯವಾಗಿದ್ದು ಆಹಾರ ಪದಾರ್ಥಗಳ ಖರೀದಿಯ ವೇಳೆ ಹೆಚ್ಚಿನ ಕಾಳಜಿ ವಹಿಸಬೇಕಾಗಿರುವುದು ಅಗತ್ಯ ಎಂದು ತಿಳಿಸಿದರು.

ಇನ್ನೋರ್ವ ಟ್ರಸ್ಟಿ ನಾರಾಯಣನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಡೂರು ಗ್ರಾಪಂ ಅಧ್ಯಕ್ಷ ಪಾಂಡು ರಂಗ ಶೆಟ್ಟಿ ಮಾತನಾಡಿದರು. ಉಪಾಧ್ಯಕ್ಷೆ ಅಮಿತಾ ರಾಜೇಶ್, ಸದಸ್ಯರಾದ ವಿಜಯ ಮರಕಾಲ, ವೀಣಾ, ಜಲಂಧರ್, ಸತೀಶ್ ಕುಲಾಲ್, ಗಿರಿಜಾ, ರಘುರಾಮ ಶೆಟ್ಟಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.

ಆರೋಗ್ಯ ಅಮೃತ ಅಭಿಯಾನದ ಸಂಯೋಜಕಿ ಅರ್ಪಿತಾ ಪ್ರಾರ್ಥಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಕಾರ್ಯಕ್ರಮ ನಿರೂಪಿಸಿ ದರು. ಸಂಯೋಜಕ ಹರಿಕೃಷ್ಣ ಶಿವತ್ತಾಯ ವಂದಿಸಿದರು.

Similar News