ಆಧಾರ್ ವಿಳಾಸ ಆನ್‌ಲೈನ್ ಪರಿಷ್ಕರಣೆ ಜೂ. 14ರ ವರೆಗೆ ಉಚಿತ

Update: 2023-03-15 18:13 GMT

ಹೊಸದಿಲ್ಲಿ, ಮಾ. 15: ಭಾರತೀಯ ನಿವಾಸಿಗಳು ತಮ್ಮ ಆಧಾರ್ ವಿವರಗಳನ್ನು ಜೂನ್ 14ರ ವರೆಗೆ ಉಚಿತವಾಗಿ ಪರಿಷ್ಕರಿಸಬಹುದು ಎಂದು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ಬುಧವಾರ ಘೋಷಿಸಿದೆ.

ಈ ಸೌಲಭ್ಯ ಮೈಆಧಾರ್ ಪೋರ್ಟಲ್‌ನಲ್ಲಿ ಲಭ್ಯವಿರಲಿದೆ (myaadhaar.uidai.gov.in) ಅಂಚೆ ಕಚೇರಿಯಂತಹ ಭೌತಿಕ ಪರಿಷ್ಕರಣ ಕೇಂದ್ರಗಳು ವಿವರಗಳನ್ನು ಪರಿಷ್ಕರಿಸಲು 50 ರೂ. ಶುಲ್ಕ ವಿಧಿಸುವುದನ್ನು ಮುಂದವರಿಸಲಿದೆ ಎಂದು ಯುಐಡಿಎಐ ಪತ್ರಿಕಾ ಹೇಳಿಕೆ ತಿಳಿಸಿದೆ.

ಆಧಾರ್ ದಾಖಲಾತಿ ಮತ್ತು ಪರಿಷ್ಕರಣೆ ನಿಯಮಗಳು-2016ರ ಪ್ರಕಾರ ಆಧಾರ್ ಸಂಖ್ಯೆ ಹೊಂದಿರುವವರು ಆಧಾರ್ ದಾಖಲಾತಿ ದಿನಾಂಕದಿಂದ ಪ್ರತಿ 10 ವರ್ಷ ಪೂರ್ಣಗೊಂಡ ಬಳಿಕ ಗುರುತು ಪತ್ರ ಹಾಗೂ ವಿಳಾಸ ದಾಖಲೆ ಸಲ್ಲಿಸುವ ಮೂಲಕ ಕನಿಷ್ಠ ಒಂದು ಬಾರಿ ಪರಿಷ್ಕರಿಸಬೇಕು. ಇದರಿಂದ ಅವರ ಮಾಹಿತಿ ಹೆಚ್ಚು  ನಿಖರತೆಯಿಂದ ಕೂಡಿರುತ್ತದೆ ಎಂದು ಯುಐಡಿಎಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Similar News