×
Ad

ರಾಮಾಂಜಿಗೆ ಬ್ಯಾಂಕ್ ಆಫ್ ಬರೋಡಾ ಸಾಧಕ ಪುರಸ್ಕಾರ

Update: 2023-03-16 21:55 IST

ಉಡುಪಿ, ಮಾ.16: ಕುಂದಾಪುರ ನಮ್ಮ ಭೂಮಿಯ ರಾಮಾಂಜಿ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಕೋರ್ಸ್ ವೇಳೆ  ಶಿಕ್ಷಣ, ಕ್ರೀಡೆ ಹಾಗೂ ಸರ್ವಾಂಗೀಣ ಕ್ಷೇತ್ರಗಳಲ್ಲಿ ಮಾಡಿದ ವಿಶೇಷ ಸಾಧನೆಗೆ ಬ್ಯಾಂಕ್ ಆಫ್ ಬರೋಡ ಸಾಧಕ ಪುರಸ್ಕಾರ ನೀಡಿ ಗೌರವಿಸುತ್ತಿದೆ.

ರಾಮಾಂಜಿ ಸೇರಿದಂತೆ ಅಂತಿಮ ಸ್ನಾತಕೋತ್ತರದ ಮೂವರು ವಿದ್ಯಾರ್ಥಿಗಳು ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಮಾ.18ರಂದು ಅಪರಾಹ್ನ 2:30ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಪ್ರೊ. ಪಿ.ಎಸ್.ಎಡಪಡಿತ್ತಾಯ ಅವರ ಅಧ್ಯಕ್ಷತೆಯಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು.

ರಾಮಾಂಜಿ ಅವರು ಮಂಗಳೂರು ವಿವಿಯ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 2022-23ನೇ ಸಾಲಿನ ಕನ್ನಡ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ.80.03 ಅಂಕಗಳೊಂದಿಗೆ ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದಾರೆ.

Similar News