ಮಂಗಳೂರು: 6ನೇ ದಿನಕ್ಕೆ ಕಾಲಿಟ್ಟ ಪೌರ ಕಾರ್ಮಿಕರ ಮುಷ್ಕರ

Update: 2023-03-18 17:14 GMT

ಮಂಗಳೂರು, ಮಾ.19: ಪೌರಕಾರ್ಮಿಕರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು  ನಡೆಸುತ್ತಿರುವ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟರೂ, ಸರಕಾರ ಅವರ ಸಮಸ್ಯೆಯನ್ನು ಆಲಿಸುವ ಯತ್ನ ನಡೆಸಿಲ್ಲ ಎಂದು ತಿಳಿದುಬಂದಿದೆ.

ಶಾಸಕ ವೇದವ್ಯಾಸ ಕಾಮತ್  ಅವರು ಅಧಿಕಾರಿಗಳೊಂದಿಗೆ ಜತೆ  ಪ್ರತಿಭಟನಾ ನಿರತ  ಪೌರಕಾರ್ಮಿಕರ ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಶುಕ್ರವಾರ ಮಾತು ಕತೆ ನಡೆಸಿದ್ದರೂ, ಫಲಕಾರಿಯಾಗಿಲ್ಲ. ನಗರದ ಹಲವಡೆ ವಿವೇವಾರಿಯಾಗದೆ  ಕಸದ ದೊಡ್ಡ ರಾಶಿಗಳು ಕಂಡು ಬಂದಿವೆ.

ನಿನ್ನೆ ನಗರದ ಅಳಕೆಯಲ್ಲಿ ಒಳಚರಂಡಿ ನಿರ್ವಹಣೆ, ಕಾರ್ಮಿಕರು ಪ್ರತಿಭಟನೆಗೆ ಕುಳಿತು, ತ್ಯಾಜ್ಯ ನೀರನ್ನು ಎದುರಿಟ್ಟು ಮೈಮೇಲೆ ಸುರಿದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಮತ್ತು  ಮಹಾನಗರ ಪಾಲಿಕೆ ಆಯುಕ್ತ ಚನ್ನಬಸಪ್ಪ ಕೆ ಜತೆ ತೆರಳಿದ ವೇದವ್ಯಾಸ ಕಾಮತ್ ಅವರು ಕಾರ್ಮಿಕರ ಮಾತುಕತೆ ನಡೆಸಿದ್ದರು.

ಮಾ.13ರಿಂದ ನೇರ ಪಾವತಿ ಸೇರಿದಂತೆ ವಿವಿಧ ಬೇಡಿಕಗಳನ್ನು ಈಡೇರಿಸುವಂತೆ ಒತ್ತಾಯಿಸಿ  ನಾವು   ಧರಣಿ ನಿರತರಾಗಿದ್ದೇವೆ. ಆದರೆ ನಮ್ಮ  ಒಂದೇ ಒಂದು ಬೇಡಿಕೆಯನ್ನು ಈಡೇರಿಕೆಗೆ ಸರಕಾರ ಗಮನ ಹರಿಸಿಲ್ಲ ಎಂದು ಮಂಗಳೂರು  ಸಫಾಯಿ ಕರ್ಮಚಾರಿ ಸಂಘದ ಕೋಶಾಧಿಕಾರಿ ಕೃಷ್ಣಪ್ಪ ತಿಳಿಸಿದ್ದಾರೆ.

Similar News