×
Ad

ದೇವೇಂದ್ರ ಫಡ್ನವೀಸ್ ಪತ್ನಿಗೆ ಬ್ಲ್ಯಾಕ್ ಮೇಲ್ ಮಾಡಲೆತ್ನಿಸಿದ ಆರೋಪಿಯ ತಂದೆ ಗುಜರಾತ್ ನಲ್ಲಿ ಸೆರೆ

Update: 2023-03-20 14:44 IST

 ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿಗೆ ಬ್ಲ್ಯಾಕ್ ಮೇಲ್ ಹಾಗೂ  ಲಂಚ ನೀಡಲು ಯತ್ನಿಸಿದ ಆರೋಪದ ಮೇಲೆ  ಬಂಧಿತರಾಗಿರುವ  ಅನಿಕ್ಷಾ ಜೈಸಿಂಘಾನಿಯ ತಂದೆ ಹಾಗೂ  ಶಂಕಿತ ಬುಕ್ಕಿ ಅನಿಲ್ ಜೈಸಿಂಘಾನಿಯನ್ನು ಮುಂಬೈ ಪೊಲೀಸರು ಗುಜರಾತ್‌ನಿಂದ ಸೋಮವಾರ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

14 ರಿಂದ 15 ಪ್ರಕರಣಗಳು ಬಾಕಿ ಇರುವ ಅನಿಲ್ ಜೈಸಿಂಘಾನಿ ಯನ್ನು ಗುಜರಾತ್‌ನಿಂದ ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.  ಆದರೆ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾಗೆ ಕ್ರಿಮಿನಲ್ ಪ್ರಕರಣವೊಂದರಲ್ಲಿ ಮಧ್ಯಪ್ರವೇಶಿಸಲು ಲಂಚ ಆಮಿಷ ಹಾಗೂ ಜೀವ ಬೆದರಿಕೆ ಒಡ್ಡಿದ  ಅರೋಪದಲ್ಲಿ ಮುಂಬೈ ಪೊಲೀಸರು ಮಾರ್ಚ್ 16 ರಂದು ಡಿಸೈನರ್ ಅನಿಕ್ಷಾ ಅನಿಲ್ ಜೈಸಿಂಘಾನಿ ಅವರನ್ನು ಬಂಧಿಸಿದ್ದರು.

Similar News