ಮೋದಿ ಉಪನಾಮ ವ್ಯಂಗ್ಯ ಪ್ರಕರಣ: ಮಾ.23ರಂದು ತೀರ್ಪು ಪ್ರಕಟಗೊಳ್ಳುವ ಸಾಧ್ಯತೆ

ಸೂರತ್ ನ್ಯಾಯಾಲಯಕ್ಕೆ ಹಾಜರಾಗಲಿರುವ ರಾಹುಲ್ ಗಾಂಧಿ

Update: 2023-03-20 15:40 GMT

ಸೂರತ್,ಮಾ.20: ಮೋದಿ ಉಪನಾಮವನ್ನು ವ್ಯಂಗ್ಯವಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧದ ಮಾನನಷ್ಟ ಪ್ರಕರಣದಲ್ಲಿ ತೀರ್ಪನ್ನು ಗುಜರಾತಿನ ಸೂರತ್ನ ನ್ಯಾಯಾಲಯವು ಮಾ.23ರಂದು ಪ್ರಕಟಿಸುವ ಸಾಧ್ಯತೆಯಿದೆ ಎಂದು ಅವರ ಪರ ವಕೀಲ ಕಿರೀಟ್ ಪಾನವಾಲಾ ಅವರು ಸೋಮವಾರ ಸುದ್ದಿಸಂಸ್ಥೆಗೆ ತಿಳಿಸಿದರು. ಆದೇಶ ಹೊರಡಿಸುವ ಸಂದರ್ಭ ರಾಹುಲ್ ನ್ಯಾಯಾಲಯದಲ್ಲಿ ಉಪಸ್ಥಿತರಿರುತ್ತಾರೆ ಎಂದರು.

‘ಎಲ್ಲ ಕಳ್ಳರು ಮೋದಿ ಸಾಮಾನ್ಯ ಉಪನಾಮವನ್ನು ಹೊಂದಿರುವುದು ಹೇಗೆ?’ ಎಂಬ ರಾಹುಲ್ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಹಾಗೂ ಗುಜರಾತಿನ ಮಾಜಿ ಸಚಿವ ಪೂರ್ಣೇಶ ಮೋದಿ ದೂರನ್ನು ದಾಖಲಿಸಿದ್ದರು.

2019ರ ಲೋಕಸಭಾ ಚುನಾವಣೆಗೆ ಮುನ್ನ ಕರ್ನಾಟಕದ ಕೋಲಾರದಲ್ಲಿ ರ್ಯಾಲಿಯೊಂದರಲ್ಲಿ ರಾಹುಲ್ ಈ ಅಪಹಾಸ್ಯದ ಹೇಳಿಕೆಯನ್ನು ನೀಡಿದ್ದರು ಮತ್ತು ಇಡೀ ಮೋದಿ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.

ಪ್ರಕರಣದ ವಿಚಾರಣೆಯ ಮೂರು ಸಂದರ್ಭಗಳಲ್ಲಿ ರಾಹುಲ್ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು.

Similar News