ಸಾರ್ವಕಾಲಿಕ ಗರಿಷ್ಠ ಬೆಲೆಗೆ ತಲುಪಿದ ಚಿನ್ನದ ದರ

Update: 2023-03-20 18:36 GMT

ಹೊಸದಿಲ್ಲಿ, ಮಾ. 20: ಸೋಮವಾರ ಚಿನ್ನದ ಬೆಲೆಯಲ್ಲಿ 1,400 ರೂ. ಏರಿಕೆಯಾಗಿದ್ದು, ಹೊಸದಿಲ್ಲಿಯಲ್ಲಿ 10 ಗ್ರಾಮ್ ಹಳದಿ ಲೋಹದ ಬೆಲೆ 60,100 ರೂ. ಗೆ ತಲುಪಿದೆ. ಇದು ಚಿನ್ನದ ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ.

ಇದಕ್ಕಿಂತ ಹಿಂದಿನ ವ್ಯವಹಾರದಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗಳಿಗೆ 58,700 ರೂ. ಆಗಿತ್ತು. ಬೆಳ್ಳಿಯ ಬೆಲೆಯಲ್ಲೂ 1,860 ರೂ. ಏರಿಕೆಯಾಗಿದ್ದು, ಬೆಳ್ಳಿ ಕೆಜಿಗೆ 69,340 ರೂ. ತಲುಪಿದೆ.

ಹಲವಾರು ಬ್ಯಾಂಕಿಂಗ್ ಬಿಕ್ಕಟ್ಟುಗಳು ಜಾಗತಿಕ ಮಾರುಕಟ್ಟೆಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಿರುವ ಪರಿಣಾಮವಾಗಿ, ಚಿನ್ನ ಮತ್ತು ಬೆಳ್ಳಿಯ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಚಿನ್ನವು ಸಾರ್ವಕಾಲಿಕ ಗರಿಷ್ಠ ಬೆಲೆಯನ್ನು ಗಳಿಸಿದೆ. ಚಿನ್ನ ಮತ್ತು ಬೆಳ್ಳಿ ಬೆಲೆ ಮೂರು ವರ್ಷಗಳ ಅವಧಿಯಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್‌ನ ನವನೀತ್ ದಮಾನಿ ಹೇಳಿದ್ದಾರೆ.

Similar News