ಕನ್ನಡತನದ ಇಚ್ಛಾಶಕ್ತಿಗೆ ಸರಕಾರ ಸದಾ ಬದ್ಧವಾಗಿರಲಿ

Update: 2023-03-20 18:45 GMT

ಮಾನ್ಯರೇ,

ಕನ್ನಡದ ಗೇಯತೆಗೆ ಶಾಸನದ ಮಾನ್ಯತೆಯನ್ನು ತಂದುಕೊಡುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಪ್ರಸ್ತುತವಾಗಿ ಮಂಡಿಸಿ ಶಾಸನಾತ್ಮಕವಾಗಿ ಸದನದ ಅನುಮೋದನೆಯೊಂದಿಗೆ ಹೊರತರಲು ಹೊರಟಿದ್ದಂತಹ ಕನ್ನಡ ಕಾಯ್ದೆ ನಿಜಕ್ಕೂ ಸಮಯೋಚಿತ ನಿರ್ಧಾರವಾಗಿದೆ. ಇದು ಮುಂದೆ ಇಲ್ಲಿಗೇ ನಿಲ್ಲದೆ ಮುಖ್ಯವಾಗಿ ನರ್ಸರಿ ಶಿಕ್ಷಣದಿಂದ ಮೊದಲುಗೊಂಡು ಉನ್ನತ ಶಿಕ್ಷಣದವರೆಗೆ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಸುವ ಕಟ್ಟುನಿಟ್ಟಿನ ಶಾಶ್ವತವಾದ ಕಾಯ್ದೆಯನ್ನು ಪಕ್ಷಾತೀತವಾಗಿ ಸದನದಲ್ಲಿ ಅನುಮೋದಿಸುವುದರೊಂದಿಗೆ ಅನುಷ್ಠಾನಕ್ಕೂ ತರಬೇಕಿದೆ. ಜೊತೆಗೆ ಶಾಲಾಕಾಲೇಜು, ಸಾರ್ವಜನಿಕ ಕ್ಷೇತ್ರದ ಸರಕಾರಿ, ಖಾಸಗಿ ಹಾಗೂ ಇನ್ಯಾವುದೇ ಸ್ವರೂಪದ ಕಾರ್ಯಕ್ರಮಗಳಲ್ಲಿನ ಬ್ಯಾನರ್, ಫ್ಲೆಕ್ಸ್ ಮತ್ತು ನಾಮಫಲಕಗಳಲ್ಲಿ ಕನ್ನಡವನ್ನು ದೊಡ್ಡದಾದ ಅಕ್ಷರಗಳಲ್ಲಿ ಬರೆಯುವಂತೆ ಅಧಿಕೃತ ಸುತ್ತೊಲೆಗಳನ್ನು ಸಂಬಂಧಿಸಿದವರಿಗೆ ಕಳುಹಿಸಿ ಎಚ್ಚರಿಕೆಯನ್ನೂ ನೀಡಬೇಕಿದೆ. ಅದರಂತೆ ಕನ್ನಡೇತರರಿಗೆ ಕನ್ನಡ ಕಲಿಕೆ, ವಿವಿಧ ಹುದ್ದೆಗಳ ಆಯ್ಕೆಗಳ ಪ್ರತೀ ಸಂದರ್ಭದಲ್ಲೂ ಕಡ್ಡಾಯ ಕನ್ನಡ ಪರೀಕ್ಷೆ, ಕೆಎಎಸ್, ಎಫ್‌ಡಿಎ, ಎಸ್‌ಡಿಎಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ವಿಷಯಕ್ಕೆ ಪ್ರಧಾನ ಆದ್ಯತೆ, ಕನ್ನಡವನ್ನು ಒಂದು ಭಾಷೆಯಾಗಿ ಪರಿಗಣಿಸಿ ಪ್ರಾರಂಭದಿಂದ ಪದವಿಯವರೆಗೆ ಓದಿದವರಿಗೆ ಉದ್ಯೋಗದಲ್ಲಿ ವಿಶೇಷ ಮೀಸಲಾತಿಯನ್ನು ಒದಗಿಸಿಕೊಡುವ ಪ್ರಾಮಾಣಿಕ ಜವಾಬ್ದಾರಿಯನ್ನು ಕೂಡ ಕರ್ನಾಟಕ ಸರಕಾರವು ನಿರ್ವಹಿಸಿಕೊಂಡು ಹೋಗಬೇಕಿದೆ.
 

Similar News