ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ: ಜೆಪಿಸಿ ತನಿಖೆಗಾಗಿ ಸಂಸತ್ತಿನ ಮೊದಲ ಮಹಡಿಯಲ್ಲಿ ವಿಪಕ್ಷ ನಾಯಕರಿಂದ ಪ್ರತಿಭಟನೆ

Update: 2023-03-21 07:24 GMT

ಹೊಸದಿಲ್ಲಿ: ವಿರೋಧ ಪಕ್ಷದ ಸಂಸದರು ಮಂಗಳವಾರ  ಸಂಸತ್ ಭವನದ ಮೊದಲ ಮಹಡಿಯಲ್ಲಿ ಪ್ರತಿಭಟನೆ ನಡೆಸಿದರು, ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪಗಳನ್ನು ಪರಿಶೀಲಿಸಲು ಜಂಟಿ ಸಂಸದೀಯ ಸಮಿತಿ(ಜೆಪಿಸಿ) ಯನ್ನು ರಚಿಸಬೇಕು ಎಂದು ಒತ್ತಾಯಿಸಿದರು. ಸಂಸತ್ತಿನಲ್ಲಿ ಪ್ರತಿಭಟನೆಯ ನಡುವೆಯೇ ಪ್ರತಿಪಕ್ಷಗಳು 'ವಿ ವಾಂಟ್ ಜೆಪಿಸಿ' ಎಂದು ಬರೆದಿರುವ ಬೃಹತ್  ಬ್ಯಾನರ್ ಹಾಗೂ ಭಿತ್ತಿಪತ್ರವನ್ನು ಪ್ರದರ್ಶಿಸಿದರು.

ಏತನ್ಮಧ್ಯೆ,ಸಂಸತ್ತಿನಲ್ಲಿ  ರಾಹುಲ್ ಗಾಂಧಿಯವರ ಲಂಡನ್ ಹೇಳಿಕೆ  ಮತ್ತು ಅದಾನಿ ವಿವಾದದ ಬಗ್ಗೆ ಗದ್ದಲ ಮುಂದುವರಿದಿರುವ  ನಡುವೆ  ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರು ಎಲ್ಲಾ ಪಕ್ಷಗಳ ನಾಯಕರನ್ನು ಸಭೆಗಾಗಿ  ತಮ್ಮ ಚೇಂಬರ್‌ಗೆ ಆಹ್ವಾನಿಸಿದರು. ಉಭಯ ಸದನಗಳನ್ನು ಇಂದು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.

ಅದಾನಿ-ಹಿಂಡನ್ ಬರ್ಗ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಿದ ನಂತರ ಲೋಕಸಭೆಯನ್ನು ಮುಂದೂಡಲಾಯಿತು. ಸ್ಪೀಕರ್ ಓಂ ಬಿರ್ಲಾ ಅವರು ಮಧ್ಯಾಹ್ನ 1 ಗಂಟೆಗೆ ತಮ್ಮ ಚೇಂಬರ್‌ನಲ್ಲಿ ಎಲ್ಲಾ ಪಕ್ಷಗಳ ನಾಯಕರ ಸಭೆಯನ್ನು ಕರೆದಿದ್ದಾರೆ.

Similar News