ದ.ಕ. ಜಿಲ್ಲೆಯ 8 ಮತಗಟ್ಟೆಗಳ ಬದಲಾವಣೆ: ಜಿಲ್ಲಾಧಿಕಾರಿ ರವಿಕುಮಾರ್

Update: 2023-03-23 16:23 GMT

ಮಂಗಳೂರು, ಮಾ.23: ದ.ಕ. ಜಿಲ್ಲೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ 6 ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ 2 ಮತಗಟ್ಟೆಗಳನ್ನು ಬದಲಾಯಿಸಲಾಗಿದೆ. ಅಲ್ಲದೆ ಮತಗಟ್ಟೆಗಳ ಹೆಸರೂ ಕೂಡ ಬದಲಾವಣೆ ಮಾಡಲಾಗಿದೆ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕದ್ರಿ ಕಿರಿಯ ತಾಂತ್ರಿಕ ಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 131ನ್ನು ಆ ಕಟ್ಟಡ ಶಿಥಿಲಗೊಂಡ ಕಾರಣ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಇರುವ ಕಾರಣ ಅದನ್ನು ಕದ್ರಿಯಲ್ಲಿರುವ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿಗೆ (ಮುಖ್ಯ ಕಟ್ಟಡದ ಪಶ್ಚಿಮ ಭಾಗ) ಬದಲಾವಣೆ ಮಾಡಲಾಗಿದೆ.

ಕದ್ರಿಯ ಕಿರಿಯ ತಾಂತ್ರಿಕ ಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 132ನ್ನು ಕದ್ರಿಯಲ್ಲಿರುವ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜ್ (ಮುಖ್ಯ ಕಟ್ಟಡದ ಮಧ್ಯಭಾಗದ ಎಡಬದಿ) ಗೆ ಬದಲಾವಣೆ ಮಾಡಲಾಗಿದೆ.

ಕದ್ರಿಯಲ್ಲಿದ್ದ ಕಿರಿಯ ತಾಂತ್ರಿಕ ಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 133ನ್ನು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜ್ (ಮುಖ್ಯ ಕಟ್ಟಡದ ಮಧ್ಯಭಾಗದ ಬಲಬದಿ) ಗೆ ಬದಲಾವಣೆ ಮಾಡಲಾಗಿದೆ.

ಕದ್ರಿಯ ಕಿರಿಯ ತಾಂತ್ರಿಕ ಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 134ನ್ನು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜ್ (ಮುಖ್ಯ ಕಟ್ಟಡದ ಪೂರ್ವ ಭಾಗ) ಗೆ ಬದಲಾವಣೆ ಮಾಡಲಾಗಿದೆ.

ಸೂರಲ್ಪಾಡಿಯ ಉರ್ದು ಪ್ರೌಢಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 208ನ್ನು ಆ ಕಟ್ಟಡವು ಶಿಥಿಲ ಗೊಂಡಿರುವುದರಿಂದ ಹಾಗೂ ಅಲ್ಲಿನ ಮತದಾರರು 2ರಿಂದ 3 ಕಿ ಮೀವರೆಗೆ ಬಂದು ಮತ ಚಲಾಯಿಸಬೇಕಿರುವ ಕಾರಣ ಬಡಗುಳಿಪಾಡಿಯ ಮಟ್ಟಿ ಅಂಗನವಾಡಿ ಕೇಂದ್ರಕ್ಕೆ ಬದಲಾವಣೆ ಮಾಡಲಾಗಿದೆ.

ಉಳಾಯಿಬೆಟ್ಟು (ಹಳೆಯ ಕಟ್ಟಡ) ಗ್ರಾಪಂ ಕಚೇರಿಯ ಮತಗಟ್ಟೆ ಸಂಖ್ಯೆ 215ನ್ನು ಪೆರ್ಮಂಕಿ ಆಚೆಬೈಲು ಅಂಗನವಾಡಿ ಕೇಂದ್ರಕ್ಕೆ ಬದಲಾವಣೆ ಮಾಡಲಾಗಿದೆ.

ತೆಂಕ ಬೆಳ್ಳೂರು ಸೈಂಟ್ ಮೈಕಲ್ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 48ನ್ನು ತೆಂಕ ಬೆಳ್ಳೂರು ಧನುಪೂಜೆ ಅಂಗನವಾಡಿ ಕೇಂದ್ರಕ್ಕೆ ಬದಲಾವಣೆ ಮಾಡಲಾಗಿದೆ.

ವಿಟ್ಲ ಪಡ್ನೂರು ಸಮುದಾಯ ಭವನ ಕೊಡಂಗಾಯಿಯ ಮತಗಟ್ಟೆ ಸಂಖ್ಯೆ 214ನ್ನು ವಿಟ್ಲ ಪಡ್ನೂರು ಅಂಗನವಾಡಿ ಕೇಂದ್ರ ಪೂರ್ಲಪ್ಪಾಡಿಗೆ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News