ಜೆಪ್ಪಿನಮೊಗರು: ರಮಝಾನ್ ಇಫ್ತಾರ್ ವ್ಯವಸ್ಥೆ

Update: 2023-03-24 08:46 GMT

ಮಂಗಳೂರು, ಮಾ.24: ರಮಝಾನ್ ಉಪವಾಸದ ಅವಧಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗಾಗಿ ರಾಷ್ಟ್ರೀಯ ಹೆದ್ದಾರಿ 66ರ ಜೆಪ್ಪಿನಮೊಗರಿನಲ್ಲಿ ಇರುವ ಮಾಸೂನ್ ಟೈಲ್ಸ್ & ಗ್ರಾನೈಟ್ಸ್ (Masun Tiles and Granites)ನಲ್ಲಿ ಉಚಿತ ಇಫ್ತಾರ್ ವ್ಯವಸ್ಥೆ ಮಾಡಲಾಗಿದೆ.

ಪಾರ್ಕಿಂಗ್ ವ್ಯವಸ್ಥೆಯೂ ಲಭ್ಯವಿದ್ದು, ಇಫ್ತಾರ್ ಸಮಯದಲ್ಲಿ ಆ ಭಾಗದಿಂದ ಪ್ರಯಾಣಿಸುವ ಯಾತ್ರಿಕರು ಇದರ ಸದುಪಯೋಗ ಪಡೆಯಬಹುದು ಎಂದು ಮಾಸೂನ್ ಟೈಲ್ಸ್ ನ ಮಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಮೊ.ಸಂ.: 9738802666ನ್ನು ಸಂಪರ್ಕಿಸಬಹುದು.

Similar News