ಕರ್ನಾಟಕ ಚುನಾವಣೆಯಲ್ಲಿ ಜಾತ್ಯತೀತ ಜನತಾದಳಕ್ಕೆ ಕೆಸಿಆರ್ ಪಕ್ಷ ಬೆಂಬಲ: ವರದಿ

Update: 2023-03-26 09:21 GMT

ಬೆಂಗಳೂರು: ಜನತಾದಳ (ಜಾತ್ಯತೀತ)ವನ್ನು ತನ್ನ "ಸಹಜ ಮಿತ್ರ" ಎಂದು ಬಣ್ಣಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್(ಕೆಸಿಆರ್)(K Chandrasekhar Rao)ನೇತೃತ್ವದ  ಭಾರತ್ ರಾಷ್ಟ್ರ ಸಮಿತಿಯು ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ನೇತೃತ್ವದ ಪಕ್ಷವನ್ನು ಸಂಪೂರ್ಣವಾಗಿ ಬೆಂಬಲಿಸಲು ನಿರ್ಧರಿಸಿದೆ ಎಂದು ಬಿಆರ್‌ಎಸ್ ಮೂಲಗಳು ರವಿವಾರ ತಿಳಿಸಿವೆ.

ತೆಲಂಗಾಣದ ಆಡಳಿತ ಪಕ್ಷವು ರಾಷ್ಟ್ರೀಯವಾಗಿ ವಿಸ್ತರಿಸುವ ತನ್ನ ಕಾರ್ಯತಂತ್ರದ ಭಾಗವಾಗಿ ಕಲ್ಯಾಣ-ಕರ್ನಾಟಕದಲ್ಲಿ (ಹಿಂದೆ ಹೈದರಾಬಾದ್-ಕರ್ನಾಟಕ ಎಂದು ಕರೆಯಲಾಗುತ್ತಿತ್ತು) ತೆಲಂಗಾಣದ ಗಡಿಯಲ್ಲಿರುವ ಕೆಲವು ಜಿಲ್ಲೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಆಯ್ಕೆ ಹೊಂದಿತ್ತು. ಆದರೆ ಆ ಯೋಜನೆಯನ್ನು ಈಗ ಕೈಬಿಡಲಾಗಿದೆ.

"ಜೆಡಿ (ಎಸ್) ನಮ್ಮ ಸಹಜ ಮಿತ್ರ ಹಾಗೂ  ನಾವು ಆ ಪಕ್ಷದೊಂದಿಗೆ ಹೋಗುತ್ತೇವೆ. ಚುನಾವಣೆಯಲ್ಲಿ ಜೆಡಿಎಸ್ ಯಶಸ್ವಿಯಾಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ.  ಕೆಸಿಆರ್ ಅವರು ಖಂಡಿತವಾಗಿಯೂ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ವಿಶೇಷವಾಗಿ ತೆಲುಗು ಮಾತನಾಡುವ ಜನರ ಬಾಳುಹ್ಯದ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಾರೆ’’ ಎಂದು  ಬಿಆರ್‌ಎಸ್ ನ ಹಿರಿಯ  ನಾಯಕರೊಬ್ಬರು ಹೇಳಿದ್ದಾರೆ.

ಮೇ ವೇಳೆಗೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

Similar News