ಕುಂದಾಪುರ ಸರ್ಕಲ್‌ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ನೂತನ ಪುತ್ಥಳಿ ಅನಾವರಣ

Update: 2023-03-26 13:12 GMT

ಕುಂದಾಪುರ : ಕುಂದಾಪುರ ನಗರದ ಪ್ರವೇಶದ್ವಾರದಲ್ಲಿ ನವೀಕೃತ ಶಾಸ್ತ್ರೀ ವೃತ್ತ ಉದ್ಘಾಟನೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಕಂಚಿನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಶನಿವಾರ ನಡೆಯಿತು.

ಶಾಸ್ತ್ರಿ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಕುಂದಾಪುರ ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಸಾರ್ವಜನಿಕರು, ಸಂಘ- ಸಂಸ್ಥೆಗಳು, ಪುರಸಭೆಯ ಸದಸ್ಯರ ಸಲಹೆಯಂತೆ ಈ ಸರ್ಕಲ್ ನವೀಕರಿಸ ಲಾಗಿದ್ದು, ಅದರೊಂದಿಗೆ ದೇಶ ಕಂಡ ಮಹಾನ್ ನಾಯಕರಲ್ಲಿ ಒಬ್ಬರಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಈ ಹಿಂದೆ ಇದ್ದ ಪ್ರತಿಮೆಯನ್ನು ಬದಲಿಸಿ, ಹೊಸದಾಗಿ ನಿರ್ಮಿಸಲಾಗಿದೆ ಎಂದರು.

ಪುರಸಭೆ ವಿಪಕ್ಷ ಸದಸ್ಯ ಚಂದ್ರಶೇಖರ್ ಖಾರ್ವಿ, ಪುರಸಭೆ ಹಿರಿಯ ಸದಸ್ಯ ಮೋಹನ್‌ದಾಸ್ ಶೆಣೈ, ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ ಮಾತನಾಡಿದರು. ಸುಂದರ ಸರ್ಕಲ್ ರೂಪುಗೊಳ್ಳುವಲ್ಲಿ ಶ್ರಮಿಸಿದ ಪುರಸಭೆಯ ಹಿಂದಿನ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪ್ರತಿಮೆ ನಿರ್ಮಿಸಿದ ಶಿಲ್ಪಿ ಶ್ರೀತಿನ್ ಶೆಟ್ಟಿಗಾರ್ ಬಂಟ್ವಾಡಿ, ಗಾರ್ಡನ್ ನಿರ್ಮಿಸಿದ ವಿವೇಕ್ ಅವರನ್ನು ಸಮ್ಮಾನಿಸಲಾಯಿತು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ.ಪೂಜಾರಿ, ಪುರಸಭೆಯ ಸದಸ್ಯರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿ ಗಳು, ಸಿಬಂದಿ, ವಿವಿಧ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿ ಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಉಪನ್ಯಾಸಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

Similar News