ಮಲ್ಲಿಕಾರ್ಜುನ ಖರ್ಗೆ ಔತಣಕೂಟ: ವಿಸ್ತೃತ ಏಕತೆಗೆ ವಿರೋಧ ಪಕ್ಷಗಳ ಮಾತುಕತೆ

Update: 2023-03-28 03:16 GMT

ಹೊಸದಿಲ್ಲಿ: ದೇಶದಲ್ಲಿ ವಿರೋಧ ಪಕ್ಷಗಳ ನಡುವೆ ಒಮ್ಮತ ಹೆಚ್ಚುತ್ತಿರುವ ನಡುವೆಯೇ, ವಿರೋಧ ಪಕ್ಷಗಳು ಏಕತೆ ಮಂತ್ರ ಪಠಿಸಿವೆ. ಮೋದಿ ಸರ್ಕಾರ ತಂದೊಡ್ಡಿರುವ ಬಿಕ್ಕಟ್ಟು, ಅಸ್ತಿತ್ವ ರಾಜಕೀಯ ಅಥವಾ ರಾಜಕೀಯ ಸ್ಪರ್ಧೆಯಿಂದಾಚೆಗೆ ಮೀರಿವೆ ವಿರೋಧ ಪಕ್ಷಗಳ ಮುಖಂಡರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಯೋಜಿಸಿದ್ದ ಔತಣದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿಯವರು ಸೇರಿದಂತೆ 19 ರಾಜಕೀಯ ಪಕ್ಷಗಳ ಮುಖಂಡರು ಅದಾನಿ ಹಗರಣ ಮತ್ತು ರಾಹುಲ್‌ಗಾಂಧಿಯವರನ್ನು ಲೋಕಸಭೆಯಿಂದ ಅನರ್ಹಗೊಳಿಸಿದ ಸಂಬಂಧ ವಿಸ್ತತ ಚರ್ಚೆ ನಡೆಸಿದರು.

ಸುಸ್ಥಿರ ಏಕತೆಗೆ ಎಲ್ಲ ಪಕ್ಷಗಳ ಮುಖಂಡರು ಒಲವು ತೋರಿದ್ದಾರೆ ಎಂದು ಮೂಲಗಳು ಹೇಳಿವೆ. ಮೇಲುಗೈತನ ಅಥವಾ ಸ್ಥಳೀಯ ಪರಸ್ಪರ ಸ್ಪರ್ಧೆಯ ಸಮಯ ಮೀರಿದೆ ಎಂದು ಅಭಿಪ್ರಾಯಕ್ಕೆ ಬಂದಿದ್ದಾರೆ. ಸಂಸತ್ತಿನ ಒಳಗೆ ಹಾಗೂ ಹೊರಗೆ ಹೇಗೆ ಪ್ರತಿಭಟನೆಯನ್ನು ಮುಂದುವರಿಸಬೇಕು ಎಂಬ ಬಗ್ಗೆ ಕಾರ್ಯತಂತ್ರ ರೂಪಿಸಲು ಮುಖಂಡರು ಸಲಹೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಎಂಕೆ, ಎನ್‌ಸಿಪಿ, ಜೆಡಿಯು, ಬಿಆರ್‌ಎಸ್, ಎಡಪಕ್ಷಗಳು, ಎಎಪಿ, ಟಿಎಂಸಿ, ಆರ್‌ಜೆಡಿ, ಎಸ್‌ಪಿ, ಜೆಎಂಎಂ ಸೇರಿದಂತೆ ಹಲವು ಪಕ್ಷಗಳ ಮುಖಂಡರು ಭಾಗವಹಿಸಿದ್ದರು ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ. ಕಾಂಗ್ರೆಸ್‌ನ ವಿವಿಧ ಸಂಘಟನೆಗಳು ಮಂಗಳವಾರದಿಂದ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿವೆ. ಚಾಂದನಿ ಚೌಕದಿಂದ ಟೌನ್‌ಹಾಲ್ ವರೆಗೆ ಮಂಗಳವಾರ ’ಮಷಲ್ ಮಾರ್ಚ್’ (ದೊಂದಿ ಮೆರವಣಿಗೆ) ಕೈಗೊಳ್ಳಲು ನಿರ್ಧರಿಸಿವೆ.

Similar News