ಕ್ವಿಂಟಿಲಿಯನ್ ಬ್ಯುಸಿನೆಸ್ ಮೀಡಿಯಾದ ಶೇ.49ರಷ್ಟು ಷೇರನ್ನು ಖರೀದಿಸಿದ ಅದಾನಿ

Update: 2023-03-28 17:40 GMT

ಹೊಸದಿಲ್ಲಿ: ಉದ್ಯಮಿ ಗೌತಮ್ ಅದಾನಿಗೆ ಸೇರಿದ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಸಂಸ್ಥೆಯು ರಾಘವ್ ಬಹ್ಲ್ ನೇತೃತ್ವದ ಡಿಜಿಟಲ್ ಬಿಸಿನೆಸ್ ನ್ಯೂಸ್ ಪ್ಲಾಟ್‌ಫಾರ್ಮ್ ಕ್ವಿಂಟಿಲಿಯನ್ ಬ್ಯುಸಿನೆಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸುಮಾರು 48 ಕೋಟಿ ರೂ.ಗಳನ್ನು ತೆತ್ತು ಸುಮಾರು 49 ಪ್ರತಿಶತ ಪಾಲನ್ನು ಖರೀದಿಸಿದೆ.
 
 
ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್ ಗೆ ನೀಡಿದ ಮಾಹಿತಿಯಲ್ಲಿ, ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ತನ್ನ ಅಂಗಸಂಸ್ಥೆ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ ಸ್ವಾಧೀನಪಡಿಸುವಿಕೆಯನ್ನು ಪೂರ್ಣಗೊಳಿಸಿದೆ ಎಂದು ಹೇಳಿದೆ . 47.84 ಕೋಟಿ ರೂಪಾಯಿಗಳಿಗೆ ಮಾರ್ಚ್ 27 ರಂದು ವಹಿವಾಟು ಪೂರ್ಣಗೊಂಡಿದೆ ಎಂದು ಅದು ಹೇಳಿದೆ.

ಕ್ವಿಂಟಿಲಿಯನ್ ಬ್ಯುಸಿನೆಸ್ ಮೀಡಿಯಾ ಸುದ್ದಿ ವೇದಿಕೆಯು ಬ್ಲೂಮ್‌ಬರ್ಗ್ ಕ್ವಿಂಟ್ ಅನ್ನು ನಡೆಸುತ್ತಿದೆ.  ಇನ್ನು ಅದನ್ನು BQ ಪ್ರೈಮ್ ಎಂದು ಕರೆಯಲಾಗುತ್ತದೆ.

Similar News