ಮಂಗಳೂರು: ​ನಿಷೇಧಿತ ಇ-ಸಿಗರೇಟ್ ಮಾರಾಟ; ಐದು ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2023-03-29 16:32 GMT

ಮಂಗಳೂರು, ಮಾ.29: ಕೇಂದ್ರ ಸರಕಾರದಿಂದ ನಿಷೇಧಿಸಲ್ಪಟ್ಟ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ಐದು ಮಂದಿಯ ವಿರುದ್ಧ ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಗರದ ಲಾಲ್‌ಬಾಗ್‌ನ ಸಾಯಿಬೀನ್ ಕಾಂಪ್ಲೆಕ್ಸ್‌ನ ನೆಲ ಅಂತಸ್ತಿನಲ್ಲಿ ಯೂನಿಕ್ ವರ್ಲ್ಡ್ ಮೊಬೈಲ್ ಮತ್ತು ಹುಕ್ಕಾ ಶಾಪ್‌ನಲ್ಲಿ ಕೇಂದ್ರ ಸರಕಾರದಿಂದ ನಿಷೇಧಿಸಲ್ಪಟ್ಟಿರುವ ಇ-ಸಿಗರೇಟ್‌ಗಳನ್ನು ಹಸನ್ ಶರೀಫ್ ಮತ್ತು ಇರ್ಶಾದ್ ಎಂಬವರು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಕಾನೂನು ಕ್ರಮ ಜರಗಿಸಿದ್ದಾರೆ.

ಈ ಸಿಗರೇಟ್‌ನ ಸೇವನೆಯಿಂದ ಆಗುವ ದುಷ್ಪರಿಣಾಮದ ಚಿತ್ರವನ್ನು ಪ್ರದರ್ಶಿಸದಿರುವ, ವಿದೇಶಿ ಹಾಗೂ ಸ್ವದೇಶಿ ಸಿಗರೇಟ್‌ಗಳನ್ನು ಮಾರಾಟ ಮಾಡಲು ಯಾವುದೇ ಪರವಾಣಿಗೆಯನ್ನು ಹೊಂದದಿರುವ ಆರೋಪವೂ ಇವರ ಮೇಲೆ ಪೊಲೀಸರು ಹೊರಿಸಿದ್ದಾರೆ. ಆರೋಪಿಗಳಿಂದ 8 ಇ-ಸಿಗರೇಟ್‌ಗಳನ್ನು ಹಾಗೂ ಸ್ವದೇಶಿ ಹಾಗೂ ವಿದೇಶಿಗಳ 99 ಸಿಗರೇಟ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ನಗರದ ಲಾಲ್‌ಬಾಗ್ ಸಾಯಿಬೀನ್ ಕಾಂಪ್ಲೆಕ್ಸ್‌ನಲ್ಲಿ ‘ಅಮಂತ್ರಣ’ ಎಂಬ ಶಾಪ್‌ನಲ್ಲಿ ಇ-ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದ . ಸಂತೋಷ, ಶಿವು ಯಾನೆ ಶಿವಾನಂದ , ಸ್ವಾತಿ ಎಂಬವರ ವಿರುದ್ಧ ಬರ್ಕೆ ಪೊಲೀಸರು ಕ್ರಮ ಜರಗಿಸಿದ್ದಾರೆ.

ಆರೋಪಿಗಳಿಂದ 13 ಕಂಪೆನಿಯ ವಿವಿಧ ಇ-ಸಿಗರೇಟ್‌ಗಳನ್ನು ಹಾಗೂ 27 ಕಂಪೆನಿಯ ಸ್ವದೇಶಿ/ವಿದೇಶಿ ವಿವಿಧ ಸಿಗರೇಟ್ ವಶಪಡಿಸಲಾಗಿದೆ. ಇವುಗಳ ಮೌಲ್ಯ 74,178 ರೂ. ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News