ವೈಯಕ್ತಿಕ ಷೇರು ಹೂಡಿಕೆಗಳ ಕುರಿತು IAS, IFS, IPS ಅಧಿಕಾರಿಗಳು ಸರಕಾರಕ್ಕೆ ಮಾಹಿತಿ ನೀಡುವಂತೆ ನಿರ್ದೇಶ

Update: 2023-03-30 12:44 GMT

ಹೊಸದಿಲ್ಲಿ: ಸ್ಟಾಕ್‌, ಷೇರುಗಳಲ್ಲಿ ಅಥವಾ ಬೇರೆ ಯಾವುದೇ ಹೂಡಿಕೆಗಳಲ್ಲಿ ಹೂಡಿದ ಮೊತ್ತ ಒಂದು ಕ್ಯಾಲೆಂಡರ್‌ ವರ್ಷದ ಆರು ತಿಂಗಳ ಮೂಲ ವೇತನಕ್ಕಿಂತ ಹೆಚ್ಚಾಗಿದ್ದ ಪಕ್ಷದಲ್ಲಿ ಸರ್ಕಾರಕ್ಕೆ ಮಾಹಿತಿ ನೀಡಬೇಕೆಂದು ಕೇಂದ್ರ ಸರ್ಕಾರ ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಕುರಿತಂತೆ ಸಿಬ್ಬಂದಿ ಸಚಿವಾಲಯ ಆದೇಶವನ್ನೂ ಹೊರಡಿಸಿದೆ.

ಅಖಿಲ ಭಾರತ ಸೇವೆಗಳ ನಿಯಮಗಳು 1968 ಇದರ ನಿಯಮ 16(4) ಅಡಿಯಲ್ಲೂ ಅಧಿಕಾರಿಗಳು ಮೇಲಿನ ಮಾಹಿತಿಯನ್ನು ಸಂಬಂಧಿತ ಪ್ರಾಧಿಕಾರದೊಂದಿಗೆ ಹಂಚಿಕೊಳ್ಳಬೇಕಿದೆ.

ಹೂಡಿಕೆಗಳ ಮೊತ್ತ ಆರು ತಿಂಗಳ ಮೂಲ ವೇತನಕ್ಕಿಂತ ಹೆಚ್ಚಾಗಿದ್ದಲ್ಲಿ ನಿರ್ದಿಷ್ಟ ಫಾರ್ಮ್‌ನಲ್ಲಿ ಸಂಬಂಧಿತ ಪ್ರಾಧಿಕಾರಕ್ಕೆ ಪ್ರತಿ ವರ್ಷ ಸಲ್ಲಿಸಬೇಕಿದೆ ಎಂದು ಎಲ್ಲಾ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಕಳುಹಿಸಲಾದ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ರಾಜ್ಯ ಹಾಲು ಒಕ್ಕೂಟಗಳ ಮೊಸರು ಪ್ಯಾಕೆಟಿನಲ್ಲಿ ಹಿಂದಿ ಪದ ಬಳಕೆ: ವ್ಯಾಪಕ ಆಕ್ರೋಶದ ಬಳಿಕ ಆದೇಶ ವಾಪಸ್

Similar News