×
Ad

ಉಡುಪಿ: ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ವಂಚನೆ

Update: 2023-03-30 21:05 IST

ಉಡುಪಿ, ಮಾ.30: ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಮಹಿಳೆಯ ಖಾತೆಯಲ್ಲಿದ್ದ ಲಕ್ಷಾಂತರ ರೂ. ಮೋಸ ಮಾಡಿರುವ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದಾಶಿವ ಹೆಗ್ಡೆ ಎಂಬವರ ಪತ್ನಿ ಪ್ರತಿಭಾ ಎಸ್.ಹೆಗ್ಡೆ ಎಂಬವರಿಗೆ ಮಾ.29ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ, ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಡೆಬಿಟ್ ಕಾರ್ಡ್ ಬ್ಲಾಕ್ ಆಗಿದ್ದು, ಕೂಡಲೇ ರಿನಿವಲ್ ಮಾಡುವಂತೆ ತಿಳಿಸಿದರು. ಅದರಂತೆ ಪ್ರತಿಭಾ ಕಾರ್ಡ್ ನಂಬರ್ ಹಾಗೂ ಓಟಿಪಿಯನ್ನು ನೀಡಿದ್ದರು. ಇದರ ಪರಿಣಾಮ ಅವರ ಖಾತೆಯಲ್ಲಿದ್ದ ಒಟ್ಟು 1,04,500ರೂ.  ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ಮೋಸ ಮಾಡಿರುವು ದಾಗಿ ದೂರಲಾಗಿದೆ.

Similar News