ಉಡುಪಿ: ವಿಧಾನಸಭಾ ಚುನಾವಣೆಗೆ ನೊಡೆಲ್ ಅಧಿಕಾರಿಗಳು

Update: 2023-03-30 16:16 GMT

ಉಡುಪಿ, ಮಾ.30: ಮೇ 10ರಂದು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ಜಿಲ್ಲಾ ಮಟ್ಟದ ನೊಡೆಲ್ ಅಧಿಕಾರಿ ಹಾಗೂ ವಿಧಾನಸಭಾ ಕ್ಷೇತ್ರ ಮಟ್ಟದ ಎಂಸಿಸಿ ನೊಡೆಲ್ ಅಧಿಕಾರಿಗಳನ್ನು ಹೆಸರಿಸಲಾಗಿದೆ.

ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಅವರು ಜಿಲ್ಲಾ ನೊಡೆಲ್ ಅಧಿಕಾರಿಯಾಗಿರುವರು. ಅವರ ಸಂಪರ್ಕ ಸಂಖ್ಯೆ: 9480878000.

ಉಳಿದಂತೆ ಬೈಂದೂರು ಕ್ಷೇತ್ರಕ್ಕೆ ಬೈಂದೂರು ತಾಲೂಕು ಪಂಚಾಯತ್‌ನ ಕಾರ್ಯನಿರ್ವಹಣಾಧಿಕಾರಿ ಭಾರತಿ (8073818580), ಕುಂದಾಪುರ ಕ್ಷೇತ್ರಕ್ಕೆ ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ (9480878105), ಉಡುಪಿ ಕ್ಷೇತ್ರಕ್ಕೆ ಉಡುಪಿ ತಾಪಂ ಕಾರ್ಯನಿರ್ವಹ ಣಾಧಿಕಾರಿ ವಿಜಯಾ ((9480154543), ಕಾಪು ಕ್ಷೇತ್ರಕ್ಕೆ ಕಾಪು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್‌ಕುಮಾರ್‌ಎಚ್.ಡಿ. (9481070634)  ಹಾಗೂ ಕಾರ್ಕಳ ಕ್ಷೇತ್ರಕ್ಕೆ ಕಾರ್ಕಳ ತಾಪಂ ಕಾರ್ಯನಿರ್ವಹಣಾಧಿಕಾರಿ (9480878100).
ವಿಧಾನಸಭಾ ಚುನಾವಣೆಗಾಗಿ ಜಿಲ್ಲೆಯಲ್ಲಿ 15 ವಿಡಿಯೋ ಸಹಿತ ಕಣ್ಗಾವಲು ತಂಡಗಳನ್ನು, 45 ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು, 17 ಸ್ಥಿರ ಕಣ್ಗಾವಲು ತಂಡಗಳನ್ನು, 92 ಸೆಕ್ಟರ್ ಆಫೀಸರ್ಸ್ ತಂಡಗಳನ್ನು, ಐದು ವೀಡಿಯೋ ಪರಿಶೀಲನಾ ತಂಡಗಳು, ಐವರು ಸದಸ್ಯರ ಲೆಕ್ಕಪತ್ರ ಪರಿಶೀಲನಾ ಸಮಿತಿಗಳನ್ನು ನೇಮಿಸಲಾಗಿದ್ದು, ಅವುಗಳು ಈಗಾಗಲೇ ಕಾರ್ಯಾರಂಭ ಮಾಡಿವೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

Similar News