ನಾನು ಶರಣಾಗುವುದಿಲ್ಲ: ಮತ್ತೆ ಯೂಟ್ಯೂಬ್ ವೀಡಿಯೋದಲ್ಲಿ ಅಮೃತ್‌ಪಾಲ್ ಸಿಂಗ್ ಪ್ರತ್ಯಕ್ಷ

Update: 2023-03-30 17:16 GMT

ಹೊಸದಿಲ್ಲಿ: ಕಳೆದ 13 ದಿನಗಳಿಂದ ಪೊಲೀಸರಿಂದ ತಲೆ ಮರೆಸಿಕೊಂಡಿರುವ ಖಾಲಿಸ್ತಾನ ಬೆಂಬಲಿಗ, ಪ್ರತ್ಯೇಕತಾವಾದಿ ನಾಯಕ ಅಮೃತಪಾಲ್ ಸಿಂಗ್ ಸತತ ಎರಡನೇ ದಿನವೂ ಯೂಟ್ಯೂಬ್‌ನಲ್ಲಿ ವೀಡಿಯೋ ಬಿಡುಗಡೆ ಮಾಡಿದ್ದು, ತಾನು ಶರಣಾಗುವುದಿಲ್ಲ ಎಂದು ಹೇಳಿದ್ದಾನೆ.

ಅಮೃತ್ ಪಾಲ್ ನ ಸಂಘಟನೆಯಾದ ವಾರಿಸ್ ದೆ ಪಂಜಾಬ್ ಸಂಘಟನೆಯ ಕಾರ್ಯಕರ್ತರನ್ನು ಹಾಗೂ ಬೆಂಬಲಿಗರನ್ನು ಪೊಲೀಸರು ಬಂಧಿಸುತ್ತಿದ್ದು, ಅಮೃತ್‌ಪಾಲ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಈ ನಡುವೆ, ಅಕಾಲ್ ತಖ್ತ್‌ನ ಜತೇದಾರ್ ತಲೆ ಮರೆಸಿಕೊಂಡಿರುವ ಅಮೃತಪಾಲ್ ಸಿಂಗ್ ನ ಬಳಿ ಪೊಲೀಸರ ಮುಂದೆ ಶರಣಾಗುವಂತೆ ಮತ್ತು ತನಿಖೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ದೋಷಿಯೆಂದು ಪರಿಗಣಿಸಲ್ಪಟ್ಟ ಕೂಡಲೇ ಸಂಸದನನ್ನು ಅನರ್ಹಗೊಳಿಸುವುದು ಕಠೋರ ಕ್ರಮ: ಸುಪ್ರೀಂಕೋರ್ಟ್

Similar News