‘‘ಮೋದಿ ಇಳಿಸಿ, ದೇಶ ಉಳಿಸಿ’’: ಎಎಪಿಯಿಂದ ದೇಶಾದ್ಯಂತ ಪೋಸ್ಟರ್ ಅಭಿಯಾನ

Update: 2023-03-30 17:16 GMT

ಹೊಸದಿಲ್ಲಿ, ಮಾ. 30: ಆಮ್ ಆದ್ಮಿ ಪಕ್ಷ ‘‘ಮೋದಿ ಇಳಿಸಿ, ದೇಶ ಉಳಿಸಿ’’ (ಮೋದಿ ಹಟಾವೊ, ದೇಶ್ ಬಚಾವೊ) ಘೋಷಣೆಯೊಂದಿಗೆ ಪೋಸ್ಟರ್ ಅಭಿಯಾನವನ್ನು ಗುರುವಾರ ಆರಂಭಿಸಿದೆ. 22 ರಾಜ್ಯಗಳಲ್ಲಿ ಹಲವು ಭಾಷೆಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ ಎಂದು ಪಕ್ಷದ ಸಂಚಾಲಕ ಗೋಪಾಲ್ ರಾಯ್ ಅವರು ಹೇಳಿದ್ದಾರೆ.

ಬಿಜೆಪಿ ಪ್ರಜೆಗಳಿಗೆ ನೀಡಿದ ಭರವಸೆಯನ್ನು ಇದುವರೆಗೆ ಈಡೇರಿಸಿಲ್ಲ ಎಂದು ದೇಶಾದ್ಯಂತ ಸಂದೇಶ ರವಾನಿಸುವುದು ಈ ಅಭಿಯಾನದ ಉದ್ದೇಶ ಎಂದು ರಾಯ್ ಅವರು ತಿಳಿಸಿದ್ದಾರೆ. ‘‘ಬಿಜೆಪಿ ರೈತರಿಗೆ ನೀಡಿದ ಭರವಸೆಯನ್ನು ಇದುವರೆಗೆ ಈಡೇರಿಸಿಲ್ಲ. ಬಿಜೆಪಿ ಸಮಸ್ಯೆಗಳನ್ನು ಪರಿಹರಿಸುವ ಬದಲು ಪ್ರಜಾಪ್ರಭುತ್ವವನ್ನು ಬಲಿ ಕೊಡಲು ನೋಡುತ್ತಿದೆ. ಇದುವರೆಗೆ 22 ರಾಜ್ಯಗಳಲ್ಲಿ ವಿವಿಧ ಭಾಷೆಗಳಲ್ಲಿ ಈ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ’’ ಎಂದು ಅವರು ತಿಳಿಸಿದ್ದಾರೆ.

ಈ ಅಭಿಯಾನದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರಾದ್ಯಂತ ಇರುವ ವಿಶ್ವವಿದ್ಯಾನಿಲಯಗಳಲ್ಲಿ ಎಪ್ರಿಲ್ 10ರಿಂದ ಇದೇ ರೀತಿಯ ಪೋಸ್ಟರ್‌ಗಳನ್ನು ಅಂಟಿಸಲಾಗುವುದು ಎಂದು ರಾಯ್ ತಿಳಿಸಿದ್ದಾರೆ. 

Similar News