ಪ್ರಯಾಣಿಕರ ದೋಣಿಯಲ್ಲಿ ಬೆಂಕಿ ದುರಂತ: ಕನಿಷ್ಟ 31 ಮಂದಿ ಮೃತ್ಯು

Update: 2023-03-30 17:31 GMT

ಮನಿಲಾ, ಮಾ.30: ದಕ್ಷಿಣ ಫಿಲಿಪ್ಪೀನ್ಸ್‍ನಲ್ಲಿ ಪ್ರಯಾಣಿಕರ ದೋಣಿಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಟ 31 ಮಂದಿ ಮೃತಪಟ್ಟಿದ್ದು 14 ಮಂದಿ ಗಾಯಗೊಂಡಿದ್ದಾರೆ. ದೋಣಿಯಲ್ಲಿದ್ದ 230 ಮಂದಿಯನ್ನು ರಕ್ಷಿಸಲಾಗಿದ್ದು 7 ಮಂದಿ ಇನ್ನೂ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ಮಿಂಡನಾವೊ ದ್ವೀಪದಿಂದ ಸುಲು ಪ್ರಾಂತದ ಜೋಲೊ ದ್ವೀಪಕ್ಕೆ ಪ್ರಯಾಣಿಸುತ್ತಿದ್ದ `ಲೇಡಿ ಮೇರಿ ಜಾಯ್-3' ಎಂಬ ದೋಣಿಯಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ನಿದ್ದೆಯಲ್ಲಿದ್ದ ಪ್ರಯಾಣಿಕರು ಗಾಭರಿಯಿಂದ ನೀರಿಗೆ ಹಾರಿದ್ದಾರೆ. ಕೆಲವರು ಈಜಿ ದಡ ಸೇರುವಲ್ಲಿ ಯಶಸ್ವಿಯಾದರೂ ಇನ್ನು ಕೆಲವರು ನೀರಿನಲ್ಲಿ ಮುಳುಗಿದ್ದಾರೆ. ಅಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯವರು ಹಾಗೂ ಕರಾವಳಿ ರಕ್ಷಣಾ ಪಡೆ ರಕ್ಷಣಾ ಕಾವಲು ಪಡೆ ರಕ್ಷಣಾ ಕಾರ್ಯಾಚರಣೆ ನಡೆಸಿ 195 ಪ್ರಯಾಣಿಕರು ಹಾಗೂ 35 ಸಿಬಂದಿಗಳನ್ನು ರಕ್ಷಿಸಿದ್ದಾರೆ ಎಂದು ಫಿಲಿಪ್ಪೀನ್ಸ್‍ನ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ನಿಕ್ಸನ್ ಅಲೊಂಝೊರನ್ನು ಉಲ್ಲೇಖಿಸಿ ಎಎಫ್‍ಪಿ ವರದಿ ಮಾಡಿದೆ. 

Similar News