ಅಹಮದಾಬಾದ್‌ನಲ್ಲಿ ಪ್ರಧಾನಿ ವಿರುದ್ಧ ಪೋಸ್ಟರ್‌ ಅಂಟಿಸಿದ 8 ಮಂದಿ ಬಂಧನ: ವರದಿ

Update: 2023-03-31 05:13 GMT

ಹೊಸದಿಲ್ಲಿ: ಅಹಮದಾಬಾದ್‌ನ ವಿವಿಧ ಪ್ರದೇಶಗಳಲ್ಲಿ "ಮೋದಿ ಹಟಾವೋ, ದೇಶ್ ಬಚಾವೋ" ಪೋಸ್ಟರ್‌ಗಳನ್ನು ಅಂಟಿಸಿದ್ದಕ್ಕಾಗಿ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಆಮ್ ಆದ್ಮಿ ಪಕ್ಷ (ಎಎಪಿ) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಷ್ಟ್ರವ್ಯಾಪಿ ಪೋಸ್ಟರ್ ಅಭಿಯಾನ ಆರಂಭಿಸಿದ ಕೇವಲ ಒಂದು ದಿನದ ನಂತರ ಈ ಬಂಧನಗಳು ನಡೆದಿವೆ.

 ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಹಾಗೂ ಈ  ವಿಷಯದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಹಮದಾಬಾದ್ ಪೊಲೀಸರು ತಿಳಿಸಿದ್ದಾರೆ.

ಎಎಪಿಯ "ಮೋದಿ ಹಟಾವೋ, ದೇಶ್ ಬಚಾವೋ" ಅಭಿಯಾನವನ್ನು ದೇಶಾದ್ಯಂತ 11 ಭಾಷೆಗಳಲ್ಲಿ ಆರಂಭಿಸಲಾಯಿತು. ಇಂಗ್ಲಿಷ್, ಹಿಂದಿ ಮತ್ತು ಉರ್ದು ಜೊತೆಗೆ, ಗುಜರಾತಿ, ಪಂಜಾಬಿ, ತೆಲುಗು, ಬೆಂಗಾಲಿ, ಒರಿಯಾ, ಕನ್ನಡ, ಮಲಯಾಳಂ ಹಾಗೂ  ಮರಾಠಿಯಲ್ಲಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ.

Similar News