ರಾಜಸ್ಥಾನ: ರಾಮನವಮಿ ಆಚರಣೆ ವೇಳೆ ವಿದ್ಯುತ್ ಸ್ಪರ್ಶ, 3 ಮಂದಿ ಮೃತ್ಯು

Update: 2023-03-31 05:27 GMT

ರಾಜಸ್ಥಾನ (ಕೋಟಾ): ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಗುರುವಾರ ರಾಮನವಮಿ ಆಚರಣೆಯ ಸಂದರ್ಭದಲ್ಲಿ ಮೂವರು ವ್ಯಕ್ತಿಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ ಹಾಗೂ  ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮಾಹಿತಿ ಪ್ರಕಾರ, ಮೃತರನ್ನು ಅಭಿಷೇಕ್ (24 ವರ್ಷ), ಮಹೇಂದ್ರ ಯಾದವ್ (40 ವರ್ಷ) ಹಾಗೂ  ಲಲಿತ್ ಪ್ರಜಾಪತ್ (25 ವರ್ಷ) ಎಂದು ಗುರುತಿಸಲಾಗಿದೆ.

"ಏಳು ಜನರನ್ನು ಆಸ್ಪತ್ರೆಗೆ ಕರೆತರಲಾಯಿತು.  ಅದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಇವರನ್ನು ಎಂಬಿಎಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಒಬ್ಬರು ಇಲ್ಲಿ ದಾಖಲಾಗಿದ್ದಾರೆ ಹಾಗೂ  ಚಿಕಿತ್ಸೆ ಪಡೆಯುತ್ತಿದ್ದಾರೆ’’ ಎಂದು ಕೋಟಾದ ಸುಲ್ತಾನ್‌ಪುರ ಸಿಎಚ್‌ಸಿ ಡಾ. ಪರ್ವೇಝ್ ಖಾನ್ ಹೇಳಿದರು.

Similar News