ಪಶ್ಚಿಮ ಬಂಗಾಳದಲ್ಲಿ ಕೋಮು ಗಲಭೆ ಸೃಷ್ಟಿಸಲು ಬಿಜೆಪಿ ಗೂಂಡಾಗಳನ್ನು ನಿಯೋಜಿಸಿದೆ: ಸಿಎಂ ಮಮತಾ ಬ್ಯಾನರ್ಜಿ ಆರೋಪ

Update: 2023-03-31 09:42 GMT

ಹೌರಾ: ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಹಿಂಸಾಚಾರ ನಡೆದಿರುವ ಕುರಿಯು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯು ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಹೊರಗಿನ ಗೂಂಡಾಗಳನ್ನು ನಿಯೋಜಿಸಿದೆ ಎಂದು ಆರೋಪಿಸಿದ್ದಾರೆ ಎಂದು aninews.in ವರದಿ ಮಾಡಿದೆ.

ಈ ಕುರಿತು ಗುರುವಾರ ಕೋಲ್ಕತ್ತಾದಲ್ಲಿ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, "ಬಿಜೆಪಿಯವರು ಕೋಮು ಗಲಭೆ ಸೃಷ್ಟಿಸಲು ರಾಜ್ಯದ ಹೊರಗಿನ ಗೂಂಡಾಗಳನ್ನು ನಿಯೋಜಿಸಿದ್ದಾರೆ. ಅವರ ಮೆರವಣಿಯನ್ನು ಯಾರೂ ತಡೆಯಲಿಲ್ಲ ಮತ್ತು ಅವರಿಗೆ ಮೆರವಣಿಗೆಯಲ್ಲಿ ಖಡ್ಗ ಮತ್ತು ಬುಲ್ಡೋಜರ್‌ನೊಂದಿಗೆ ಹೆಜ್ಜೆ ಹಾಕಲು ಯಾವುದೇ ಹಕ್ಕಿಲ್ಲ. ಹೌರಾದಲ್ಲಿ ಇಂತಹ ಕೃತ್ಯವೆಸಗುವ ಧಾರ್ಷ್ಟ್ಯ ಅವರಿಗೆ ಎಲ್ಲಿಂದ ಬಂತು?" ಎಂದು ವಾಗ್ದಾಳಿ ನಡೆಸಿದ್ದಾರೆ.

"ಅವರ್ಯಾಕೆ ಮೆರವಣಿಗೆ ಮಾರ್ಗವನ್ನು ಬದಲಿಸಿದರು ಮತ್ತು ಒಂದು ಕೋಮಿನ ವಿರುದ್ಧ ಗಲಭೆ ಮಾಡಲು ಅನಧಿಕೃತ ಮಾರ್ಗ ಬಳಸಿದರು?" ಎಂದು ಅವರು ಪ್ರಶ್ನಿಸಿದ್ದಾರೆ.

ಇತರರ ಮೇಲೆ ದಾಳಿ ನಡೆಸಿ, ಕಾನೂನು ಮಧ್ಯಪ್ರವೇಶದ ಮೂಲಕ ಪರಿಹಾರ ಪಡೆಯಬಹುದು ಎಂದು ಅವರು ಭಾವಿಸಿದ್ದರೆ, ಅಂಥವರನ್ನು ಜನರು ಮುಂದೊಂದು ದಿನ ತಿರಸ್ಕರಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

"ಯಾರು ತಪ್ಪು ಮಾಡಿಲ್ಲವೊ ಅಂತಹ ವ್ಯಕ್ತಿಗಳನ್ನು ಬಂಧಿಸುವುದಿಲ್ಲ‌. ಜನರ ಮನೆಗಳನ್ನು ಧ್ವಂಸಗೊಳಿಸುವ ಧೈರ್ಯ ಬಿಜೆಪಿಯವರಿಗೆ ಹೇಗೆ ಬಂತು?" ಎಂದು ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.

Similar News