ಹೌರಾ ಹಿಂಸಾಚಾರದ ತನಿಖೆ ಸಿಐಡಿಗೆ ಹಸ್ತಾಂತರ

Update: 2023-04-02 16:02 GMT

ಕೋಲ್ಕತಾ, ಎ.2: ರಾಮನವಮಿಯಂದು  ಪಶ್ಚಿಮಬಂಗಾಳದ ಹೌರಾ ಜಿಲ್ಲೆಯಲ್ಲಿ  ಭುಗಿಲೆದ್ದ  ಹಿಂಸಾಚಾರದ ತನಿಖೆಯನ್ನು  ಮಮತಾ ಬ್ಯಾನರ್ಜಿ ಸರಕಾರವು ಸಿಐಡಿಗೆ ಹಸ್ತಾಂತರಿಸಿದೆ.

ಸಿಐಡಿ ಇಲಾಖೆಯ ಐಜಿಪಿ ಮಟ್ಟದ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಗಲಭೆಯ ಬಗ್ಗೆ ತನಿಖೆ ನಡೆಯಲಿದೆಯೆಂದು ರಾಜ್ಯ ಪೊಲೀಸರು ರವಿವಾರ ತಿಳಿಸಿದ್ದಾರೆ. 

ಪ್ರಕರಣದ ತನಿಖೆಗಾಗಿ  ಹಿರಿಯ ಸಿಐಡಿ ಅಧಿಕಾರಿಗಳ ನೇತೃತ್ವದಲ್ಲಿ ತಂಡವೊಂದು ಗಲಭೆ  ಸಂಭವಿಸಿದ ಸ್ಥಳಕ್ಕೆ  ಶೀಘ್ರದಲ್ಲೇ ಭೇಟಿ ನೀಡಲಿದೆ. ಪಶ್ಚಿಮಬಂಗಾಳ ಅಪರಾಧ ವಿಧಿವಿಧಾನ ಇಲಾಖೆಯ ತಜ್ಞರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದು, ಮಾದರಿಗಳನ್ನು ಸಂಗ್ರಹಿಸಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಪಶ್ಚಿಮಬಂಗಾಳದ ಹೌರಾ ಜಿಲ್ಲೆಯ  ಶಿಬಪುರ ಪ್ರದೇಶದಲ್ಲಿ ಮಾರ್ಚ್ 30ರಂದು ರಾಮನವಮಿಯ ಸಂದರ್ಭದಲ್ಲಿ ಹಿಂಸಾಚಾರ  ಭುಗಿಲೆದ್ದಿತ್ತು.  ಹೌರಾ ಹಿಂಸಾಚಾರದ ಘಟನೆಗೆ ಸಂಬಂಧಿಸಿ ಈವರೆಗೆ 38 ಮಂದಿಯನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Similar News