ಕ್ರೀಸ್ ತೊರೆದಿದ್ದ ಶಿಖರ್ ಧವನ್, ರನೌಟ್ ಮಾಡದ ಅಶ್ವಿನ್: ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಗುವಾಹಟಿ: ರಾಜಸ್ಥಾನ ರಾಯಲ್ಸ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಬೌಲಿಂಗ್ ಮಾಡುವ ಮೊದಲೇ ನಾನ್ ಸ್ಟ್ರೈಕ್ ನಲ್ಲಿ ಕ್ರೀಸ್ ಬಿಟ್ಟು ಮುಂದೆ ಹೋಗಿದ್ದ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಅವರನ್ನು ರನೌಟ್ ಮಾಡದೆ ಎಚ್ಚರಿಕೆ ನೀಡಿದರು. ಈ ಹಿಂದೆ ಜೋಸ್ ಬಟ್ಲರ್ ಅವರನ್ನು ನಾನ್ ಸ್ಟ್ರೈಕರ್ ಎಂಡ್ ನಲ್ಲಿ ಬೇಗನೆ ಕ್ರೀಸ್ ತೊರೆದಿದ್ದಕ್ಕಾಗಿ ಅಶ್ವಿನ್ ಔಟ್ ಮಾಡಿದ್ದರು. ಆ ಘಟನೆಯು ಈಗ ಅಭಿಮಾನಿಗಳಿಗೆ ನೆನಪಿಸಿತು.
ಐಪಿಎಲ್ 2019 ರ ಸಮಯದಲ್ಲಿ, ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದ ಅಶ್ವಿನ್ ಅವರು ಬಟ್ಲರ್ ಅವರನ್ನು ನಾನ್-ಸ್ಟ್ರೈಕರ್ ಕೊನೆಯಲ್ಲಿ ರನ್ ಔಟ್ ಮಾಡಿದ್ದರು. ಇದು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂಬ ಚರ್ಚೆಗೆ ಗ್ರಾಸವಾಗಿತ್ತು.
ನಾನ್ ಸ್ಟ್ರೈಕ್ ಬಿಟ್ಟು ಮುಂದೆ ಹೋಗಿದ್ದಕ್ಕೆ ಅಶ್ವಿನ್ ರಿಂದ ಈ ಹಿಂದೆ ರನೌಟಾಗಿದ್ದ ಜೋಸ್ ಬಟ್ಲರ್ ಈಗ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಅಶ್ವಿನ್ ಸಹ ಆಟಗಾರನಾಗಿದ್ದಾರೆ. ಬಟ್ಲರ್ ಮುಖಕ್ಕೆ ಕ್ಯಾಮರಾ ಹಿಡಿಯುವ ಮೂಲಕ ಹಿಂದಿನ ಘಟನೆಯನ್ನು ನೆನಪಿಸಲಾಯಿತು.
ಪಂಜಾಬ್ ಕಿಂಗ್ಸ್ ಇನಿಂಗ್ಸ್‌ನ ಏಳನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಈ ಘಟನೆ ನಡೆದಿದೆ.
ಕ್ರಿಕೆಟ್ ಅಭಿಮಾನಿಗಳು ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಘಟನೆಯ ಕುರಿತಾಗಿ ಜಾಲತಾಣದಲ್ಲಿ ಹೆಚ್ಚು ಮೀಮ್ ಗಳು ಹರಿದಾಡುತ್ತಿವೆ.
ಪಂಜಾಬ್ ತಂಡವು ರಾಜಸ್ಥಾನವನ್ನು 5 ರನ್ ನಿಂದ ರೋಚಕವಾಗಿ ಮಣಿಸಿದೆ.
Ashwin warns Dhawan but cameraman shows Buttler pic.twitter.com/BAL6V1nRHE
— Alter Ego ॐ (@imAlter_ego) April 6, 2023