×
Ad

ಹನುಮ ಜಯಂತಿ ಪ್ರಯುಕ್ತ ಭಕ್ತಿ ಸಂಗೀತ ಕಾರ್ಯಕ್ರಮ

Update: 2023-04-06 18:15 IST

ಉಡುಪಿ, ಎ.6: ಹನುಮ ಜಯಂತಿ ಪ್ರಯುಕ್ತ ಉಡುಪಿ ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ಹಮ್ಮಿಕೊಳ್ಳಲಾದ ಭಕ್ತಿ ಸಂಗೀತ ಕಾರ್ಯಕ್ರಮವನ್ನು ದಂತ ವೈದ್ಯ ಡಾ.ವಿಜೇಂದ್ರ ರಾವ್ ಗುರುವಾರ ಉದ್ಘಾಟಿಸಿದರು.

ಕೃಷ್ಣ, ಮುಖ್ಯಪ್ರಾಣ ದೇವರಿಗೆ ವಜ್ರಕವಚ ಅಲಂಕಾರ ಸೇವೆಯನ್ನು ಭವ್ಯಶ್ರಿ ಕಿದಿಯೂರು, ಶ್ರೀ ಕೃಷ್ಣ ದೇವರ ಸನ್ನಿಧಾನ ಹಾಗೂ ದ್ವಾರ ಗೋಪುರಕ್ಕೆ ವಿಶೇಷ ಹೂವಿನ ಅಲಂಕಾರ ಸೇವೆಯನ್ನು ಯುವರಾಜ್ ಮಸ್ಕತ್ ನೆರವೇರಿಸಿದರು.  ಭಕ್ತರಿಗೆ ಭೋಜನ ಪ್ರಸಾದದಲ್ಲಿ  ಹಾಲು ಪಾಯಸ ಸೇವೆಯನ್ನು  ಭುವನೇಂದ್ರ ಕಿದಿಯೂರು ನೀಡಿದರು.

ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್, ಪ್ರಾಯೋಜಕರಾದ ಕಿದಿಯೂರು ಹೋಟೆಲ್ ಮಾಲಕ ಭುವನೇಂದ್ರ ಕಿದಿಯೂರು, ಜಿತೇಶ್ ಕಿದಿಯೂರು, ಯುವರಾಜ್ ಮಾಸ್ಕತ್, ಸುಧಾಕರ ಆಚಾರ್ಯ ಉಪಸ್ಥಿತರಿದ್ದರು. ಲಕ್ಷ್ಮೀ ನಾರಾಯಣ ಉಪಾಧ್ಯಾಯ ಮತ್ತು ಬಳಗದವರಿಂದ ಭಕ್ತಿಸಂಗೀತ  ಕಾರ್ಯಕ್ರಮ  ನಡೆಯಿತು. ವಿದ್ವಾನ್ ಸುಧೀರ ಕೊಡವೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Similar News