ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸುವುದು ಹೇಗೆ?: ಇಲ್ಲಿದೆ ಮಾಹಿತಿ

Update: 2023-04-10 10:51 GMT

ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಮೇ 13ರಂದು ಫಲಿತಾಂಶಗಳು ಪ್ರಕಟಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಇಲ್ಲವೇ ಎಂಬ ಸಂಶಯ ಹಲವರನ್ನು ಕಾಡಬಹುದು.ಮತದಾರರ ಪಟ್ಟಿಯಲ್ಲಿ  ಹೆಸರುಗಳನ್ನು ಎರಡು ರೀತಿಯಲ್ಲಿ ಪರಿಶೀಲಿಸಬಹುದು.

1. ಎಪಿಕ್ ಸಂಖ್ಯೆ ವಿಧಾನ
ನೀವು ಮತದಾರರ ಗುರುತಿನ ಚೀಟಿ (ಎಪಿಕ್)ಯನ್ನು ಹೊಂದಿದ್ದರೆ ಅದರ ಸಂಖ್ಯೆಯನ್ನು ಬಳಸಬಹುದು. ಇದು ಅಕ್ಷರಗಳು ಮತ್ತು ಅಂಕಿಗಳಿಂದ ಕೂಡಿದ ಕೋಡ್ ಆಗಿದ್ದು,ಗುರುತು ಚೀಟಿಯ ಎದುರು ಭಾಗದಲ್ಲಿ ದಪ್ಪಕ್ಷರಗಳಲ್ಲಿ ಮುದ್ರಿತವಾಗಿರುತ್ತದೆ. ಎಲೆಕ್ಟೋರಲ್ ಸರ್ಚ್ ಪೇಜ್ https://electoralsearch.in ಗೆ ಭೇಟಿ ನೀಡಿ ‘ಸರ್ಚ್ ಬೈ ಎಪಿಕ್ ’ನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಎಪಿಕ್ ಸಂಖ್ಯೆ, ನಿಮ್ಮ ರಾಜ್ಯ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. 
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಪರದೆಯ ಕೆಳಭಾಗದಲ್ಲಿ ನಿಮ್ಮ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರದ ವಿವರಗಳು ಮೂಡಿ ಬರುತ್ತವೆ.

2. ಸಾಮಾನ್ಯ ಮಾಹಿತಿ ವಿಧಾನ

ನೀವು ಮತದಾರರ ಗುರುತಿನ ಚೀಟಿ ಅಥವಾ ಎಪಿಕ್ ಸಂಖ್ಯೆಯನ್ನು ಹೊಂದಿಲ್ಲವಾದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಲು ಸಾಮಾನ್ಯ ಮಾಹಿತಿಯನ್ನು ಬಳಸಬಹುದು. ಎಲೆಕ್ಟೋರಲ್ ಸರ್ಚ್ ಪೇಜ್ https://electoralsearch.in ಗೆ ಭೇಟಿ ನೀಡಿ ‘ಸರ್ಚ್ ಬೈ ಡಿಟೇಲ್ಸ್ ’(Search by Details) ಅನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಹೆಸರು, ವಯಸ್ಸು, ರಾಜ್ಯ, ಜಿಲ್ಲೆ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ. 

ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಪರದೆಯ ಕೆಳಭಾಗದಲ್ಲಿ ವಿವರಗಳು ಮೂಡಿ ಬರುತ್ತವೆ.

Similar News