×
Ad

ಉಕ್ರೇನ್ ಗೆ ಬೆಂಬಲ ನೀಡುವುದು ನೈಜ ವಿಶ್ವಗುರುವಿನ ‘ಏಕೈಕ ಸರಿಯಾದ ಆಯ್ಕೆ’: ಉಕ್ರೇನ್ ವಿದೇಶಾಂಗ ಸಚಿವೆ

Update: 2023-04-10 22:11 IST

ಹೊಸದಿಲ್ಲಿ, ಎ. 10: ಉಕ್ರೇನ್ ಗೆ ಬೆಂಬಲ ನೀಡುವುದು ನೈಜ ವಿಶ್ವಗುರುವಿನ ‘‘ಏಕೈಕ ಸರಿಯಾದ ಆಯ್ಕೆ’’ ಎಂದು ಭಾರತದ ಪ್ರವಾಸದಲ್ಲಿರುವ ಉಕ್ರೇನ್ ನ ಫಸ್ಟ್ ಡೆಪ್ಯುಟಿ ವಿದೇಶ ಸಚಿವೆ ಎಮಿನ್ ಷಾಪರೊವ ಸೋಮವಾರ ಹೇಳಿದ್ದಾರೆ.

‌‘‘ಹಲವಾರು ಋಷಿಗಳು, ಸಂತರು ಮತ್ತು ಗುರುಗಳಿಗೆ ಜನ್ಮ ನೀಡಿರುವ ನೆಲವಾಗಿರುವ ಭಾರತಕ್ಕೆ ಭೇಟಿ ನೀಡಲು ಸಂತೋಷಪಡುತ್ತೇನೆ. ಇಂದು ಭಾರತ ವಿಶ್ವಗುರುವಾಗಲು ಬಯಸಿದೆ. ನಮ್ಮ ಪ್ರಕರಣ ಸ್ಪಷ್ಟವಾಗಿದೆ: ಅಮಾಯಕ ಬಲಿಪಶುವಿನ ಮೇಲೆ ಆಕ್ರಮಣ ನಡೆಯುತ್ತಿದೆ. ನೈಜ ವಿಶ್ವಗುರುವಾಗಲು ಉಕ್ರೇನ್ ಗೆ ಬೆಂಬಲ ನೀಡುವುದು ಏಕೈಕ ಸರಿಯಾದ ಮಾರ್ಗವಾಗಿದೆ’’ ಎಂದು ಉಕ್ರೇನ್ ಸಚಿವೆ ಟ್ವೀಟ್ ಮಾಡಿದ್ದಾರೆ.

ನಾಲ್ಕು ದಿನಗಳ ಭಾರತ ಪ್ರವಾಸದ ವೇಳೆ, ಉಕ್ರೇನ್ ಸಚಿವೆ ವಿದೇಶ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಂಜಯ್ ವರ್ಮರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅವರು ಮಾತುಕತೆಯ ವೇಳೆ, ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮಾತುಕತೆ ನಡೆಸುತ್ತಾರೆ ಹಾಗೂ ಉಕ್ರೇನ್ನ ಪ್ರಸಕ್ತ ಸ್ಥಿತಿಗತಿ ಮತ್ತು ಪರಸ್ಪರ ಹಿತಾಸಕ್ತಿಯ ಜಾಗತಿಕ ವಿದ್ಯಮಾನಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತಾರೆ.

ಅವರು ವಿದೇಶ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆಯ ಸಹಾಯಕ ಸಚಿವೆ ಮೀನಾಕ್ಷಿ ಲೇಖಿಯನ್ನೂ ಭೇಟಿಯಾಗಲಿದ್ದಾರೆ.

Similar News