×
Ad

ಆರ್‌ಸಿಬಿ ವಿರುದ್ಧ ಲಕ್ನೊಗೆ 1 ವಿಕೆಟ್ ರೋಚಕ ಜಯ

ಪ್ಲೆಸಿಸ್, ಕೊಹ್ಲಿ, ಮ್ಯಾಕ್ಸ್‌ವೆಲ್ ಅರ್ಧಶತಕ ವ್ಯರ್ಥ

Update: 2023-04-10 23:36 IST

 ಬೆಂಗಳೂರು, ಎ.10: ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಮಾರ್ನಸ್ ಸ್ಟೋನಿಸ್(65 ರನ್, 30 ಎಸೆತ) ಹಾಗೂ ನಿಕೊಲಸ್ ಪೂರನ್(62 ರನ್, 19 ಎಸೆತ)ಅರ್ಧಶತಕಗಳ ಕೊಡುಗೆ, ಆಯುಷ್ ಬದೋನಿ(30 ರನ್, 24 ಎಸೆತ)ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ 15ನೇ ಐಪಿಎಲ್ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ತಂಡವನ್ನು 1 ವಿಕೆಟ್ ಅಂತರದಿಂದ ಮಣಿಸಿ ಶಾಕ್ ನೀಡಿತು.

ಗೆಲ್ಲಲು 213 ರನ್ ಗುರಿ ಪಡೆದಿದ್ದ ಲಕ್ನೊ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು.

ಲಕ್ನೊ 23 ರನ್‌ಗೆ 3 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ 4ನೇ ವಿಕೆಟ್‌ಗೆ 76 ರನ್ ಸೇರಿಸಿದ ಸ್ಟೋನಿಸ್ ಹಾಗೂ ರಾಹುಲ್(18 ರನ್) ತಂಡವನ್ನು ಆಧರಿಸಿದರು. ಈ ಇಬ್ಬರು ಔಟಾದ ನಂತರ ಪೂರನ್ ಹಾಗೂ ಬದೋನಿ 6ನೇ ವಿಕೆಟಿಗೆ 84 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಸನಿಹ ಕೊಂಡೊಯ್ದರು.
 
 ಆರ್‌ಸಿಬಿ ಪರ ವೇಗಿಗಳಾದ ಮುಹಮ್ಮದ್ ಸಿರಾಜ್(3-22) ಹಾಗೂ ವೇಯ್ನ ಪಾರ್ನೆಲ್(3-41)ತಲಾ 3 ವಿಕೆಟ್‌ಗಳನ್ನು ಪಡೆದರು.

ಇದಕ್ಕೂ ಮೊದಲು ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ತಂಡ ನಾಯಕ ಎಫ್‌ಡು ಪ್ಲೆಸಿಸ್(ಔಟಾಗದೆ 79 ರನ್, 46 ಎಸೆತ), ವಿರಾಟ್ ಕೊಹ್ಲಿ(61 ರನ್,44 ಎಸೆತ) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್(59 ರನ್, 29 ಎಸೆತ)ಅರ್ಧಶತಕಗಳ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 212 ರನ್ ಗಳಿಸಿದೆ.
 

Similar News