×
Ad

ಸಂವಿಧಾನ ರಕ್ಷಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಕಾಂಗ್ರೆಸ್ ಕೈ ಜೋಡಿಸಲಿದೆ: ಸೋನಿಯಾ ಗಾಂಧಿ

Update: 2023-04-11 23:17 IST

ಹೊಸದಿಲ್ಲಿ, ಎ. 11: ನರೇಂದ್ರ ಮೋದಿ ಸರಕಾರ ಎಲ್ಲ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ಕಟಿಬದ್ಧವಾಗಿದೆ. ಆದುದರಿಂದ ಚುನಾವಣೆ ಸಮೀಪಿಸುತ್ತಿರುವ ಹಲವು ಪ್ರಮುಖ ರಾಜ್ಯಗಳಲ್ಲಿ ತನ್ನ ಪಕ್ಷ ಸಂದೇಶವನ್ನು ನೇರವಾಗಿ ಜನರಿಗೆ ತಲುಪಿಸಲಿದೆ ಹಾಗೂ ಸಂವಿಧಾನ ರಕ್ಷಿಸಲು ಸಮಾನ ಮನಸ್ಕ ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸಲಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಮಂಗಳವಾರ ಹೇಳಿದರು. 

‘ದಿ ಹಿಂದೂ’ ದಿನ ಪತ್ರಿಕೆಗೆ ಬರೆದ ಲೇಖನದಲ್ಲಿ ಸೋನಿಯಾ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರಕಾರ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ವ್ಯವಸ್ಥಿತವಾಗಿ ಹಾನಿಗೊಳಿಸುತ್ತಿದೆ. ಅವರ ಕ್ರಮಗಳು ಪ್ರಜಾಪ್ರಭುತ್ವದ ಬಗ್ಗೆ ಆಳವಾಗಿ ಬೇರೂರಿರುವ ತಿರಸ್ಕಾರವನ್ನು ಪ್ರದರ್ಶಿಸುತ್ತಿವೆ ಎಂದು ಆರೋಪಿಸಿದ್ದಾರೆ. 
ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರಿಂದ ಹೆಚ್ಚುತ್ತಿರುವ ದ್ವೇಷ ಹಾಗೂ ಹಿಂಸಾಚಾರದ ಅಲೆಯನ್ನು ಪ್ರಧಾನಿ ಅವರು ನಿರ್ಲಕ್ಷಿಸುತ್ತಿದ್ದಾರೆ. ಅವರು ಒಮ್ಮೆಯೂ ಶಾಂತಿ ಹಾಗೂ ಸೌಹಾರ್ದಕ್ಕೆ ಕರೆ ನೀಡಿಲ್ಲ. ತಪ್ಪಿತಸ್ಥರ ವಿರುದ್ಧ ಹಾಗೂ ಅವರನ್ನು ನ್ಯಾಯದ ಮುಂದೆ ತರಲು ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು. 

ಧಾರ್ಮಿಕ ಹಬ್ಬಗಳು ಸಂತೋಷ ಹಾಗೂ ಸಂಭ್ರಮದ ಬದಲಿಗೆ ಬೆದರಿಸುವ ಸಂದರ್ಭಗಳಾಗಿ ಪರಿಗಣಮಿಸುತ್ತಿವೆ. ಅವರು ಧರ್ಮ, ಜಾತಿ, ಆಹಾರ, ಲಿಂಗ ಅಥವಾ ಭಾಷೆಯ ಕಾರಣಕ್ಕೆ ಬೆದರಿಕೆ ಹಾಗೂ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಅವರು ಹೇಳಿದರು. 

ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸೋನಿಯಾ ಗಾಂಧಿ, ಮೋದಿ ಅವರ ಹೇಳಿಕೆಗಳು ಪ್ರಸಕ್ತ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತ್ತಿವೆ ಅಥವಾ ಅವರ ವಾಕ್ ಆಡಂಬರ ಈ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತವೆ ಎಂದರು. 

Similar News