×
Ad

ಅತೀಕ್‌ ಅಹ್ಮದ್‌, ಸಹೋದರನ ಹತ್ಯೆಗೈದು 'ಜೈ ಶ್ರೀರಾಂ' ಘೋಷಣೆ ಕೂಗಿದ ದಾಳಿಕೋರರು

Update: 2023-04-15 23:52 IST

ಲಕ್ನೋ:  ಉತ್ತರಪ್ರದೇಶದ ಮಾಜಿ ಸಂಸದ, ಗ್ಯಾಂಗ್‌ಸ್ಟರ್ ಅತೀಕ್‌ ಅಹ್ಮದ್‌ ಮತ್ತು ಆತನ ಸಹೋದರ ಅಶ್ರಫ್‌ ಅಹ್ಮದ್‌ ರನ್ನು ದುಷ್ಕರ್ಮಿಗಳು ಪೊಲೀಸರ ಕಸ್ಟಡಿಯಲ್ಲಿರುವಾಗಲೇ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಹತ್ಯೆ ಬಳಿಕ ದಾಳಿಕೋರರು 'ಜೈ ಶ್ರೀರಾಂ' ಘೋಷಣೆ ಕೂಗುವುದು ವಿಡಿಯೋದಲ್ಲಿ ಕಂಡುಬಂದಿದೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿರುವಾಗಲೇ ದುಷ್ಕರ್ಮಿಗಳು ಅತೀಕ್‌ ಸಹೋದರರ ಮೇಲೆ ದಾಳಿ ನಡೆಸಿದ್ದು, ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. 

ದಾಳಿಯ ನೇರ ದೃಶ್ಯಗಳು ಸೆರೆಯಾಗಿದ್ದು, ದಾಳಿ ಬಳಿಕ  ದುಷ್ಕರ್ಮಿಗಳು 'ಜೈ ಶ್ರೀರಾಂ' ಘೋಷಣೆ ಕೂಗುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಘಟನಾ ಸ್ಥಳದಿಂದ ಇಬ್ಬರು ಶೂಟರ್‌ ಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.

Similar News