ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ: 65 ಗಂಟೆಗಳ ಸಿಬಿಐ ವಿಚಾರಣೆ ನಂತರ ಟಿಎಂಸಿ ಶಾಸಕ ಜಿಬನ್ ಕೃಷ್ಣ ಸಹಾ ಬಂಧನ
Update: 2023-04-17 12:09 IST
ಕೋಲ್ಕತಾ: ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಟಿಎಂಸಿ ಶಾಸಕ ಜಿಬನ್ ಕೃಷ್ಣ ಸಹಾ ಅವರನ್ನು 65 ಗಂಟೆಗಳ ಕಾಲ (ಸುಮಾರು ಮೂರು ದಿನಗಳು) ವಿಚಾರಣೆ ನಡೆಸಿದ ನಂತರ ಬಂಧಿಸಿದೆ.
ಸಿಬಿಐ ಮೂಲಗಳ ಪ್ರಕಾರ, ಟಿಎಂಸಿ ಶಾಸಕ ತನಿಖೆಗೆ ಸಹಕರಿಸುತ್ತಿಲ್ಲ ಎನ್ನಲಾಗಿದೆ.
ಸಹಾ ಅವರನ್ನು ಮುರ್ಷಿದಾಬಾದ್ ಜಿಲ್ಲೆಯ ಅವರ ನಿವಾಸದಲ್ಲಿ ವಿಚಾರಣೆ ಮಾಡಲಾಗುತ್ತಿತ್ತು ಹಾಗೂ ಸೋಮವಾರ ಬೆಳಗ್ಗೆ ಸಿಬಿಐನ ವಿಶೇಷ ತಂಡವು ಕೋಲ್ಕತ್ತಾಗೆ ಕರೆದೊಯ್ಯಿತು. ಶುಕ್ರವಾರ (ಎಪ್ರಿಲ್ 14) ಮಧ್ಯಾಹ್ನ 12 ಗಂಟೆಗೆ ವಿಚಾರಣೆ ಆರಂಭವಾಯಿತು.
ಸಹಾ ಅವರು ಮಾಣಿಕ್ ಭಟ್ಟಾಚಾರ್ಯ ಹಾಗೂ ಪಾರ್ಥ ಚಟರ್ಜಿ ನಂತರ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದ ಮೂರನೇ ಶಾಸಕರಾಗಿದ್ದಾರೆ.