×
Ad

ಬೈಂದೂರು: ಎ.18ರಂದು ಕಾಂಗ್ರೆಸ್‌ನಿಂದ ರ‍್ಯಾಲಿ, ಸಮಾವೇಶ

Update: 2023-04-17 19:13 IST

ಬೈಂದೂರು, ಎ.17: ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಕೆ.ಗೋಪಾಲ ಪೂಜಾರಿ ಅವರ ಪರವಾಗಿ ನಾಳೆ ಬೃಹತ್ ರ‍್ಯಾಲಿ ಹಾಗೂ ಸಮಾವೇಶ ನಡೆಯಲಿದೆ.

ಎ.18ರ ಮಂಗಳವಾರ ಬೆಳಿಗ್ಗೆ 10:30ಕ್ಕೆ ಯಡ್ತರೆ ವೃತ್ತದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪಾದಯಾತ್ರೆ ಜರುಗಲಿದೆ. ಬಳಿಕ ಬೈಂದೂರು ಬಸ್ ನಿಲ್ದಾಣದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದ್ದು, ಸಭೆಯನ್ನುದ್ದೇಶಿಸಿ  ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮಾತನಾಡಲಿದ್ದಾರೆ ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಕಟಣೆ ತಿಳಿಸಿದೆ. 

Similar News