×
Ad

ಎ.18: ಟ್ಯಾಪ್ಮಿಯ 37ನೇ ಘಟಿಕೋತ್ಸವ

Update: 2023-04-17 19:14 IST

ಮಣಿಪಾಲ, ಎ.17: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಆಡಳಿತಕ್ಕೊಳಪಟ್ಟಿರುವ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ)ಯ 37ನೇ ಘಟಕೋತ್ಸವ ಸಮಾರಂಭ ಎ.18ರ ಮಂಗಳವಾರ ಉಡುಪಿಯ ಅಂಬಾಗಿಲಿನಲ್ಲಿರುವ  ಅಮೃತ ಗಾರ್ಡನ್‌ನಲ್ಲಿ ನಡೆಯಲಿದೆ.

ಆ್ಯಡ್‌ವರ್ಬ್ ಟೆಕ್ನಲಜಿ ಲಿಮಿಟೆಡ್‌ನ ಅಧ್ಯಕ್ಷ ಜಲಜ್ ದಾನಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಕೋತ್ಸವ ಭಾಷಣ ಮಾಡಲಿದ್ದು,   ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ಮಾಹೆಯ ಪ್ರೊ ಚಾನ್ಸಲರ್  ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. 

ಪಿಜಿಡಿಎಂ ಕಾರ್ಯಕ್ರಮದ 39ನೇ ಬ್ಯಾಚ್‌ನ 370 ವಿದ್ಯಾರ್ಥಿಗಳು, ಪಿಜಿಡಿಎಂ ಬ್ಯಾಂಕಿಂಗ್ ಆ್ಯಂಡ್ ಫೈನಾನ್ಸ್ ಸರ್ವಿಸ್ ಕಾರ್ಯಕ್ರಮದ 8ನೇ ಬ್ಯಾಚ್‌ನ 59 ವಿದ್ಯಾರ್ಥಿಗಳು, ಹ್ಯುಮನ್ ರಿಸೋರ್ಸ್ ಮ್ಯಾನೇಜ್‌ಮೆಂಟ್ ನ 4ನೇ ಬ್ಯಾಚ್‌ನ 23 ವಿದ್ಯಾರ್ಥಿಗಳು, ಮಾರ್ಕೆಟಿಂಗ್‌ನ ಮೂರನೇ ಬ್ಯಾಚ್‌ನ 37 ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಲಿದ್ದಾರೆ. ಇದರೊಂದಿಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಟ್ಯಾಪ್ಮಿಯ ಪ್ರಕಟಣೆ ತಿಳಿಸಿದೆ.

Similar News