ಕುಂದಾಪುರ: ಮನೆಗೆ ನುಗ್ಗಿ ನಗ-ನಗದು ಕಳವು
Update: 2023-04-17 20:47 IST
ಕುಂದಾಪುರ, ಎ.17: ಕೋಟೇಶ್ವರ ಅಂಕದಕಟ್ಟೆ ಎಂಬಲ್ಲಿ ಮನೆಯೊಂದಕ್ಕೆ ಎ.15ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಮರಿಯಾ ಡಿಸೋಜಾ ಯಾನೆ ಕವಿತಾ ತನ್ನ ಮಗಳೊಂದಿಗೆ ಕಾರ್ಕಳದ ಬೋಳ ಎಂಬಲ್ಲಿಗೆ ಹೋಗಿದ್ದು, ಈ ವೇಳೆ ಮನೆಯ ಅಡುಗೆ ಮನೆಯ ಬಾಗಿಲಿನಿಂದ ಒಳ ಪ್ರವೇಶಿಸಿದ ಕಳ್ಳರು, ರೂಮಿನ ಕಪಾಟಿನಲ್ಲಿದ್ದ 504 ಗ್ರಾಂ ಚಿನ್ನಾಭರಣಗಳು ಮತ್ತು ನಗದು ಇರುವ ಕಬ್ಬಿಣದ ಲಾಕರ್ ಸಮೇತ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಕಳವಾದ 504 ಗ್ರಾಂ ಚಿನ್ನಾಭರಣದ ಮೌಲ್ಯ 21,63,000 ರೂ. ಹಾಗೂ ಸೇಫ್ ಲಾಕರ್‌ನ ಮೌಲ್ಯ 25,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.