ಕಾಯಿ ಹೆಕ್ಕುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು

Update: 2023-04-17 15:25 GMT

ಹೆಬ್ರಿ, ಎ.17: ಮರದಿಂದ ಬಿದ್ದ ಹುಳಿಕಾಯಿಯನ್ನು ಹೆಕ್ಕುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಎ.17ರಂದು ಬೆಳಗ್ಗೆ ಬೆಳಂಜೆ ಗ್ರಾಮದ ಹಣೆಗೋಡು ಎಂಬಲ್ಲಿ ನಡೆದಿದೆ.

ಮೃತರನ್ನು ಸ್ಥಳೀಯ ನಿವಾಸಿ ಕೃಷ್ಣ ನಾಯ್ಕ್(40) ಎಂದು ಗುರುತಿಸಲಾಗಿದೆ. ಮನೆಯ ಜಾಗದಲ್ಲಿರುವ ವಾಂಟೆ ಹುಳಿ ಮರದ ಕೆಳಗೆ ಬಿದ್ದ ಕಾಯಿ ಹೆಕ್ಕುತ್ತಿದ್ದ ಇವರು, ಕುಸಿದು ಬಿದ್ದರೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಅವರು ಹೆಬ್ರಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News