×
Ad

ಶತಾಯುಷಿ ಪದ್ಮಾವತಿ ಪ್ರಭು ನಿಧನ

Update: 2023-04-18 19:35 IST

ಉಡುಪಿ, ಎ.18: ಪಲಿಮಾರಿನ ಪದ್ಮಾವತಿ ವಿ. ಪ್ರಭು (101 ವರ್ಷ) ಸೋಮವಾರ ನಿಧನ ಹೊಂದಿದರು.

ಪಲಿಮಾರಿನ ಖ್ಯಾತ ಅಕ್ಕಿ ಮತ್ತು ಎಣ್ಣೆಗಿರಣಿ ಉದ್ಯಮಿಯಾಗಿದ್ದ ವೆಂಕಟ್ರಾಯ ಪ್ರಭು ಇವರ ಪತ್ನಿ ಪದ್ಮಾವತಿ ಪ್ರಭು, ಹಿಂದಿ, ಇಂಗ್ಲಿಷ್, ಕನ್ನಡ ಭಾಷೆಯಲ್ಲಿ ಅಪಾರ ಪ್ರಭುತ್ವವನ್ನು ಹೊಂದಿದ್ದರು.

ಪದ್ಮಾವತಿ ಇವರಿಗೆ ಕಳೆದ ವರ್ಷ ನೂರು ತುಂಬಿದ ಸಂದರ್ಭದಲ್ಲಿ ಶತಾಬ್ಧಿಯ ನೆನಪಿಗೆ ಅವರ ಪುತ್ರ ಪಿ.ಗೋಕುಲ್‌ ನಾಥ್ ಪ್ರಭು ಪಾದೂರಿನ ವಿದ್ಯಾಪೋಷಕ್ ವಿದ್ಯಾರ್ಥಿನಿಯೊಬ್ಬರಿಗೆ ಸುಮಾರು 7 ಲಕ್ಷ ರೂ. ವೆಚ್ಚದ ಮನೆಯನ್ನು ನಿರ್ಮಿಸಿಕೊಟ್ಟಿದ್ದರು. ಸರಳ ಸಜ್ಜನಿಕೆಯ ಪದ್ಮಾವತಿ ಪ್ರಭು,  ನಾಲ್ವರು ಪುತ್ರರು, ಮೂವರು ಪುತ್ರಿ ಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Similar News