ಐಪಿಎಲ್:ಪಂಜಾಬ್ ವಿರುದ್ಧ ಆರ್‌ಸಿಬಿಗೆ ಗೆಲುವು
ಮುಹಮ್ಮದ್ ಸಿರಾಜ್ ಮಾರಕ ಬೌಲಿಂಗ್, ಪ್ಲೆಸಿಸ್, ಕೊಹ್ಲಿ ಅರ್ಧಶತಕ
ಮೊಹಾಲಿ, ಎ.20: ಆರಂಭಿಕ ಆಟಗಾರ ಪ್ರಭ್‌ಸಿಮ್ರನ್ ಸಿಂಗ್(46 ರನ್, 30 ಎಸೆತ) ಹಾಗೂ ಜಿತೇಶ್ ಶರ್ಮಾ(41 ರನ್, 27 ಎಸೆತ)ಪ್ರಯತ್ನದ ಹೊರತಾಗಿಯೂ ವೇಗದ ಬೌಲರ್ ಮುಹಮ್ಮದ್ ಸಿರಾಜ್(4-21) ನೇತೃತ್ವದ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್‌ನ 27ನೇ ಪಂದ್ಯದಲ್ಲಿ 24 ರನ್ ಅಂತರದಿಂದ ಸೋಲುಂಡಿದೆ.
ಗುರುವಾರ ನಡೆದ ಪಂದ್ಯದಲ್ಲಿ ಗೆಲ್ಲಲು 175 ರನ್ ಗುರಿ ಪಡೆದಿದ್ದ ಪಂಜಾಬ್ ತಂಡ 18.2 ಓವರ್‌ಗಳಲ್ಲಿ 150 ರನ್ ಗಳಿಸಿ ಆಲೌಟಾಯಿತು. ಆರ್‌ಸಿಬಿ ಪರ ಸಿರಾಜ್ ಯಶಸ್ವಿ ಪ್ರದರ್ಶನ ನೀಡಿದರೆ, ವನಿಂದು ಹಸರಂಗ(2-39)ಸಿರಾಜ್‌ಗೆ ಸಾಥ್ ನೀಡಿದರು.
ಆರ್‌ಸಿಬಿಯನ್ನು 174ಕ್ಕೆ ನಿಯಂತ್ರಿಸಿದ ಪಂಜಾಬ್: ಆರಂಭಿಕ ಆಟಗಾರ ಎಫ್ ಡು ಪ್ಲೆಸಿಸ್(84 ರನ್, 56 ಎಸೆತ)ಹಾಗೂ ನಾಯಕ ವಿರಾಟ್ ಕೊಹ್ಲಿ (59 ರನ್, 47)ಮೊದಲ ವಿಕೆಟ್‌ಗೆ ಸೇರಿಸಿದ ಭರ್ಜರಿ ಜೊತೆಯಾಟದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪಂಜಾಬ್ ಕಿಂಗ್ಸ್ 174 ರನ್‌ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.