ಅಂದರ್ ಬಾಹರ್: ಐವರ ಬಂಧನ
Update: 2023-04-20 22:10 IST
ಕುಂದಾಪುರ, ಎ.20: ಕಂದಾವರ ಗ್ರಾಮದ ಹೇರಿಕೆರೆ ಎಂಬಲ್ಲಿರುವ ಹಾಡಿಯಲ್ಲಿ ಎ.19ರಂದು ಸಂಜೆ ವೇಳೆ ಅಂದರ್ ಬಾಹರ್ ಎಂಬ ಇಸ್ಪೀಟು ಜುಗಾರಿ ಆಡುತ್ತಿದ್ದ ಐವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕಂದಾವರ ಗ್ರಾಮದ ಹೇರಿಕೆರೆಯ ದಿನೇಶ ದೇವಾಡಿಗ(42), ಕಳಂಜೆಯ ಉದಯ(47), ಹೇರಿಕೆರೆಯ ರೈಸ್ ಅಹಮ್ಮದ್(27), ದಿನೇಶ(40), ನಾರಾಯಣ(62) ಬಂಧಿತ ಆರೋಪಿಗಳು. ಇವರಿಂದ 4,600ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.