×
Ad

ಖಾಸಗಿ ಸಂಸ್ಥೆಗಳಿಗೂ ದೃಢೀಕರಣಕ್ಕಾಗಿ ಆಧಾರ್ ಬಳಕೆಗೆ ಅವಕಾಶ: ಕೇಂದ್ರದಿಂದ ಕರಡು ಅಧಿಸೂಚನೆ ಪ್ರಕಟ

Update: 2023-04-20 22:43 IST

ಹೊಸದಿಲ್ಲಿ,ಎ.20: ದೃಢೀಕರಣಕ್ಕಾಗಿ  ನಾಗರಿಕರು ಸ್ವಯಂಪ್ರೇರಿತವಾಗಿ ಸಲ್ಲಿಸುವ ಆಧಾರ್ ಅನ್ನು ಬಳಸಿಕೊಳ್ಳುವುದಕ್ಕೆ  ಖಾಸಗಿ  ಸಂಸ್ಥೆಗಳಿಗೂ ಅವಕಾಶ ನೀಡುವ ಪ್ರಸ್ತಾವನೆಯ ಕುರಿತ ಕರಡು ಅಧಿಸೂಚನೆಯನ್ನು ಕೇಂದ್ರ ಸರಕಾರವು ಗುರುವಾರ ಪ್ರಕಟಿಸಿದೆ.

 ನಿವಾಸಿಗಳ  ಬದುಕನ್ನು ಸುಗಮಗೊಳಿಸುವುದನ್ನು ಉತ್ತೇಜಿಸುವ ಹಾಗೂ ಅವರಿಗೆ ಸೇವೆಗಳು ಉತ್ತಮವಾಗಿ ಲಭ್ಯವಾಗುವಂತೆ ಮಾಡಲು ಉತ್ತಮ ಆಡಳಿತಕ್ಕಾಗಿ ಆಧಾರ್ ದೃಢೀಕರಣ (ಸಾಮಾಜಿಕ ಕಲ್ಯಾಣ, ಸಂಶೋಧನೆ, ಜ್ಞಾನ) ಕರಡು ತಿದ್ದುಪಡಿ ಕಾನೂನುಗಳು-2023   ಅವಕಾಶ ನೀಡುತ್ತದೆ.

ಪ್ರಸಕ್ತ ಚಾಲ್ತಿಯಲ್ಲಿರುವ  ಉತ್ತಮ ಆಡಳಿತಕ್ಕಾಗಿನ  ಆಧಾರ್ ದೃಢೀಕಕರಣ ಕಾನೂನು-2020 ,  ಈಗಾಗಲೇ, ಸರಕಾರಿ ಇಲಾಖೆಗಳು ಆಧಾರ್ ಅನ್ನು ದೃಢೀಕರಣಕ್ಕೆ ಬಳಸಿಕೊಳ್ಳುವುದಕ್ಕೆ ಅನುಮತಿ ನೀಡುತ್ತದೆ.  ಒಂದು ಸಲದ ಪಾಸ್ವರ್ಡ್ (ಓಟಿಪಿ) ಅಥವಾ  ಬಯೋಮೆಟ್ರಿಕ್ ಪಾಸ್ಕೋಡ್  ಮೂಲಕ ಆಧಾರ್ ದೃಢೀಕರಿಸಲು ಸರಕಾರಿ ಇಲಾಖೆಗಳಿಗೆ  ಅನುಮತಿ ನೀಡಲಾಗಿದೆ. ಉತ್ತಮ ಆಡಳಿತಕ್ಕಾಗಿ ಡಿಜಿಟಲ್ ಫ್ಲ್ಯಾಟ್ಫಾರಂ ಬಳಕೆ, ಸಾಮಾಜಿಕ ಕಲ್ಯಾಣ ಸೌಲಭ್ಯಗಳು ದುರುಪಯೋಗವಾಗುವುದಕ್ಕೆ ತಡೆ ಹಾಗೂ ಜ್ಞಾನದ ಪ್ರಸರಣೆಯನ್ನು ಇದು ಖಾತರಿಪಡಿಸುತ್ತದೆ.

ಆದಾಗ್ಯೂ ಖಾಸಗಿ ವಲಯದ ಸಂಸ್ಥೆಗಳು ಯಾವೆಲ್ಲಾ ವಿಷಯಗಳ ದೃಢೀಕರಣಕ್ಕಾಗಿ ಆಧಾರ್ ಅನ್ನು ಬಳಸಿಕೊಳ್ಳಬಹುದು ಎಂಬ ಬಗ್ಗೆ ಸರಕಾರವು ಇನ್ನಷ್ಟೇ ಪ್ರಕಟಣೆಯನ್ನು ನೀಡಬೇಕಿದೆ.

Similar News