ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿ ಪರಿಶೀಲಿಸಲು ಪ್ರಧಾನಿಯಿಂದ ಉನ್ನತ ಮಟ್ಟದ ಸಭೆ
Update: 2023-04-21 13:23 IST
ಹೊಸದಿಲ್ಲಿ: ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಡಾನ್‌ನಲ್ಲಿ ಪರಿಸ್ಥಿತಿ "ತುಂಬಾ ಉದ್ವಿಗ್ನ''ವಾಗಿದೆ. ತಕ್ಷಣದ ಯೋಜನೆಗಳು ಹಾಗೂ ಸಂಭವನೀಯ ಸ್ಥಳಾಂತರಿಸುವಿಕೆ ಸೇರಿದಂತೆ ಭಾರತೀಯ ಸಮುದಾಯದ ಸುರಕ್ಷತೆ ಹಾಗೂ ಯೋಗಕ್ಷೇಮವನ್ನು ಖಾತ್ರಿಪಡಿಸುವತ್ತ ಗಮನಹರಿಸುತ್ತಿದ್ದೇವೆ ಎಂದು ಭಾರತ ನಿನ್ನೆ ಹೇಳಿದೆ.
ರಮಝಾನ್ ತಿಂಗಳಲ್ಲಿ ಕದನ ವಿರಾಮಕ್ಕಾಗಿ ವಿಶ್ವ ಶಕ್ತಿಗಳ ಮನವಿಯನ್ನು ನಿರ್ಲಕ್ಷಿಸಿ ಸುಡಾನ್ ದೇಶದ ಸೇನೆ ಹಾಗೂ ಅರೆಸೇನಾ ಪಡೆಗಳ ನಡುವಿನ ಯುದ್ಧದಲ್ಲಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.