ರಿಕ್ಷಾ ಚಾಲಕ ಆತ್ಮಹತ್ಯೆ
Update: 2023-04-21 21:43 IST
ಕಾಪು, ಎ.21: ಮದುವೆಯಾಗದ ಚಿಂತೆಯಲ್ಲಿ ರಿಕ್ಷಾ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಎ.20ರಂದು ಸಂಜೆ ವೇಳೆ ಮಣಿಪುರ ಗ್ರಾಮದ ಕೆಳಮನೆ ಎಂಬಲ್ಲಿ ನಡೆದಿದೆ.
ಮೃತರನ್ನು ಕಟಪಾಡಿ ಮಣಿಪುರದ ಸೂರ್ಯಣ್ಣ ಶೆಟ್ಟಿ ಎಂಬವರ ಮಗ ಸುನೀಲ್ ಶೆಟ್ಟಿ(39) ಎಂದು ಗುರುತಿಸಲಾಗಿದೆ.
ಕಟಪಾಡಿಯಲ್ಲಿ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಇವರು, ಮದುವೆಯಾಗದ ಬಗ್ಗೆ ಮನ ನೊಂದು ಮನೆಯ ರೂಮಿನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.