ಅಮಾಸೆಬೈಲು: ಗ್ರಾಪಂ ಕಚೇರಿಗೆ ಬೀಗ ಹಾಕಿ ಮಹಿಳಾ ಸಿಬ್ಬಂದಿಯ ಅಕ್ರಮ ಬಂಧನ; ಪ್ರಕರಣ ದಾಖಲು

Update: 2023-04-21 16:16 GMT

ಅಮಾಸೆಬೈಲು, ಎ.21: ಮನೆ ನಂಬರ್ ವಿಷಯಕ್ಕೆ ಸಂಬಂಧಿಸಿ ಗ್ರಾಪಂ ಕಚೇರಿಗೆ ಬಂದ ವ್ಯಕ್ತಿಯೊಬ್ಬರು ಕಚೇರಿಗೆ ಬೀಗ ಹಾಕಿ ಮಹಿಳಾ ಸಿಬ್ಬಂದಿಯನ್ನು  ಅಕ್ರಮ ಬಂಧನದಲ್ಲಿರಿಸಿರುವ ಘಟನೆ ಮಡಾಮಕ್ಕಿ ಎಂಬಲ್ಲಿ ಎ.20ರಂದು ಸಂಜೆ ವೇಳೆ ನಡೆದಿದೆ.

ಶೇಡಿಮನೆ ಗ್ರಾಮದ ಅಗಳಿಬೈಲು ನಿವಾಸಿ ಸತೀಶ್ ಹೆಗ್ಡೆ ಮಡಾಮಕ್ಕಿ ಗ್ರಾಮ ಪಂಚಾಯತ್ ಕಚೇರಿಗೆ ಮನೆ ನಂಬ್ರರ್ ಉದ್ದೇಶಕ್ಕೆ ಬಂದಿದ್ದು, ಈ ವೇಳೆ ಗ್ರಾಮ ಪಂಚಾಯತ್ ಕಚೇರಿಯ ಮಹಿಳಾ ಸಿಬ್ಬಂದಿ ಡಾಟಾ ಎಂಟ್ರಿ ಆಪರೇಟರ್ ಪವಿತ್ರಾ ಆರ್.ಶೆಟ್ಟಿಗೆ ಬೆದರಿಸಿ ಹೊರಗಿನಿಂದ ಬಾಗಿಲನ್ನು ಮುಚ್ಚಿ ಹೊರಗಿನಿಂದ ಬೀಗ ಹಾಕಿ ಅಕ್ರಮ ಬಂಧನದಲ್ಲಿರಿಸಿ ಭಯ ಭೀತರನ್ನಾಗಿಸುವಂತೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ.

ಈ ವಿಷಯವನ್ನು ಮಹಿಳಾ ಸಿಬ್ಬಂದಿ ದೂರವಾಣಿ ಮುಖಾಂತರ ಮಡಾಮಕ್ಕಿ ಗ್ರಾಪಂ ಪಿಡಿಓ ಭಾಸ್ಕರ್ ಶೆಟ್ಟಿಗೆ ಮಾಹಿತಿ ನೀಡಿದ್ದು ವಿಷಯ ತಿಳಿದು ಕಚೇರಿಗೆ ಬಂದಿದಾಗ ಸತೀಶ ಹೆಗ್ಡೆ ಕಚೇರಿ ಎದುರು ನಿಂತು ಪಿಡಿಓ ಮತ್ತು ಕಚೇರಿಯ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ದೂರಲಾಗಿದೆ.

ಈ ಕುರಿತು ಪಿಡಿಓಗೆ ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News