×
Ad

ಬ್ರಹ್ಮಾವರ: ಬಾವಿಗೆ ಬಿದ್ದು ಕೃಷಿಕ ಮೃತ್ಯು

Update: 2023-04-21 21:49 IST

ಬ್ರಹ್ಮಾವರ, ಎ.21: ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಎ.21ರಂದು ಬೆಳಗ್ಗೆ ಎಂಬಲ್ಲಿ ನಡೆದಿದೆ.

ಮೃತರನ್ನು ಚೇರ್ಕಾಡಿ ಗ್ರಾಮದ ನೂಜಿನಬೈಲು ನಿವಾಸಿ ಸಲ್ವಡೊರ್ ಡಿಸೋಜ (80) ಎಂದು ಗುರುತಿಸಲಾಗಿದೆ.

ಕೃಷಿ ಕೆಲಸ ಮಾಡಿಕೊಂಡಿದ್ದ ಇವರು, ಪಂಪ್ ಚಾಲನೆ ಮಾಡುವ ಬಗ್ಗೆ ಮನೆಯ ಬಾವಿಯ ನೀರು ನೋಡಲು ಹೋಗಿ ಕಾಲು ಜಾರಿ ಬಾವಿಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News