ತೇಜಸ್ವಿ ಯಾದವ್ ವಿರುದ್ಧ ಮಾನನಷ್ಟ ಮೊಕದ್ದಮೆ !

Update: 2023-04-27 03:06 GMT

ಅಹ್ಮದಾಬಾದ್: ಯುಟ್ಯೂಬ್‌ನಲ್ಲಿ ಗುಜರಾತಿಗಳ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕೆ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಇಲ್ಲಿನ ಮೆಟ್ರೋಪಾಲಿಟನ್ ನ್ಯಾಐಆಲಯದಲ್ಲಿ ಬುಧವಾರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.

ಯೂಟ್ಯೂಬ್ ವಿಡಿಯೊ ತುಣುಕಿನಲ್ಲಿ ಯಾದವ್ ಯಾರ ಹೆಸರನ್ನೂ ಉಲ್ಲೇಖಿಸದೇ "ಆ ಇಬ್ಬರು ವಂಚಕರು. ಅವರಿಗೆ ವಂಚನೆ ಮಾಡಲು ಅನುಮತಿ ಇದೆ. ದೇಶದ ಪ್ರಸಕ್ತ ಪರಿಸ್ಥಿತಿಯನ್ನು ನೋಡಿದಾಗ, ಕೇವಲ ಗುಜರಾತಿಗಳು ಮಾತ್ರ ವಂಚಿಸಬಹುದು; ಅವರ ವಂಚನೆಗೆ ಕ್ಷಮೆ ಇದೆ. ಅವರಿಗೆ ಎಲ್‌ಐಸಿ ಹಣ, ಬ್ಯಾಂಕ್ ಹಣ ನೀಡಿ. ಅವರು ಅದರೊಂದಿಗೆ ಓಡಿಹೋಗುತ್ತಾರೆ. ಅದಕ್ಕೆ ಯಾರು ಹೊಣೆ?" ಎಂಧು ಹೇಳಿದ್ದರು.

ಹರ್ಷ ಮೆಹ್ತಾ ಎಂಬುವವರು ಈ ಬಗ್ಗೆ ದೂರು ದಾಖಲಿಸಿದ್ದಾರೆ. ಸರ್ಕಾರೇತರ ಸಂಸ್ಥೆಯೊಂದರ ಪದಾಧಿಕಾರಿಯಾಗಿರುವ ಮೆಹ್ತಾ, ಆರ್‌ಜೆಡಿ ನಾಯಕನ ವಿರುದ್ಧ ಭಾರತ ದಂಡಸಂಹಿಸತೆ ಸೆಕ್ಷನ್ 499 ಮತ್ತು 500ರ ಅಡಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

Similar News